ಕ್ರೀಡೆ

ಯುವರಾಜ್ ಸಿಂಗ್ ವಿರುದ್ಧ ಕೌಟುಂಬಿಕ ಹಿಂಸಾಚಾರ ಕೇಸ್ ದಾಖಲಿಸಿದ ಅತ್ತಿಗೆ ಆಕಾಂಕ್ಷಾ

Pinterest LinkedIn Tumblr

ನವದೆಹಲಿ: ಟೀಂ ಇಂಡಿಯಾ ಕ್ರಿಕೆಟಿಗ ಖ್ಯಾತ ಆಲ್‌ ರೌಂಡರ್‌ ಯುವರಾಜ್‌ ಸಿಂಗ್‌, ಆತನ ತಾಯಿ ಶಬ್ನಂ ಸಿಂಗ್‌ ಮತ್ತು ಸಹೋದರ ಜೋರಾವರ್‌ ಸಿಂಗ್‌ ಕೌಟುಂಬಿಕ ದೌರ್ಜನ್ಯದ ಕೇಸ್ ದಾಖಲಾಗಿದೆ.

ಯುವರಾಜ್ ಸಿಂಗ್ ಸಹೋದರ ಜೋರಾವರ್‌ ಪತ್ನಿ ಹಾಗೂ ಹಿಂದಿ ಬಿಗ್ ಬಾಸ್ ಸೀಸನ್-10 ಸ್ಪರ್ಧಿ ಆಕಾಂಕ್ಷಾ ಶರ್ಮಾ ಬುಧವಾರ ಕೇಸ್ ದಾಖಲಿಸಿದ್ದು ಇದೇ ಅ.21ಕ್ಕೆ ನಿಗದಿಸಲಾಗಿದೆ.

ಇನ್ನೂ ಈ ಕೇಸಿನ ಬಗ್ಗೆ ಯಾವುದೇ ಹೇಳಿಕೆಯನ್ನು ನೀಡಲು ಆಕಾಂಕ್ಷಾ ನಿರಾಕರಿಸಿದ್ದಾರೆ. ಆದರೆ ಆಕೆಯ ವಕೀಲೆ ಸ್ವಾತಿ ಸಿಂಗ್‌, ಕೇಸು ದಾಖಲಾಗಿರುವುದನ್ನು ದೃಢೀಕರಿಸಿದ್ದಾರೆ.

ಕೌಟುಂಬಿಕ ಹಿಂಸೆ ಎಂದರೆ ಕೇವಲ ದೈಹಿಕ ಹಿಂಸೆ ಎಂದು ಅರ್ಥ ಅಲ್ಲ. ಅದು ಮಾನಸಿಕ ಮತ್ತು ಹಣಕಾಸು ಹಿಂಸೆಯನ್ನು ಕೂಡ ಒಳಗೊಂಡಿರುತ್ತದೆ. ಇದಕ್ಕೆ ಯುವರಾಜ್‌ ಸಿಂಗ್‌ ಕೂಡ ಸಾಥ್‌ ನೀಡಿದ್ದಾರೆ. ಜೋರಾವರ್‌ ಮತ್ತು ಆತನ ತಾಯಿ ನನ್ನ ಕಕ್ಷಿದಾರಳಿಗೆ ಹಿಂಸೆ ನೀಡಿದ್ದಾರೆ ಎಂದು ಸ್ವಾತಿ ಸಿಂಗ್ ತಿಳಿಸಿದ್ದಾರೆ.

Comments are closed.