ರಾಷ್ಟ್ರೀಯ

ಬರಿ 2,200 ರೂ.ಗೆ ಮೈಕ್ರೋಮ್ಯಾಕ್ಸ್ 4G ಫೋನ್ ಬಿಡುಗಡೆ

Pinterest LinkedIn Tumblr


ಹೊಸದಿಲ್ಲಿ: ಭಾರತದ ಮುಂಚೂಣಿಯ ಸ್ಮಾರ್ಟ್‌ಫೋನ್ ತಯಾರಿಕ ಸಂಸ್ಥೆ ಮೈಕ್ರೋಮ್ಯಾಕ್ಸ್, ಸರ್ಕಾರಿ ಸ್ವಾಮ್ಯದ ದೂರ ಸಂಪರ್ಕ ಸಂಸ್ಥೆ ಬಿಎಸ್‌ಎನ್‌ಎಲ್ ಸಹಭಾಗಿತ್ವದಲ್ಲಿ 4ಜಿ ಸೌಲಭ್ಯವನ್ನೊಳಗೊಂಡ ‘ಭಾರತ್ 1’ ಫೋನ್ ಬಿಡುಗಡೆಗೊಳಿಸಿದೆ.

ಬೆಲೆ: 2,200 ರೂ.
ಮಾರಾಟ: ಅಕ್ಟೋಬರ್ 20ರಿಂದ

ಮೈಕ್ರೋಮ್ಯಾಕ್ಸ್ 4ಜಿ ಫೀಚರ್ ಒಳಗೊಂಡಿರುವ ಭಾರತ್ 1 ಫೋನ್ ಖರೀದಿಸಿದ ಗ್ರಾಹಕರು ಮಾಸಿಕ 97 ರೂ.ಗಳಿಗೆ ಅನಿಯಮಿತ ಕರೆ ಜತೆ ಡೇಟಾ ಸೇವೆಯನ್ನು ಪಡೆಯಬಹುದಾಗಿದೆ.

ಪ್ರಮುಖವಾಗಿಯೂ ಭಾರತದ ಗ್ರಾಮೀಣ ಪ್ರದೇಶವನ್ನು ಗುರಿಯಾಗಿರಿಸಿಕೊಂಡಿರುವ ಮೈಕ್ರೋಮ್ಯಾಕ್ಸ್ 4ಜಿ ಭಾರತ್ 1 ಫೋನ್, ದೇಶದ 22 ಪ್ರಾದೇಶಿಕ ಭಾಷೆಗಳಲ್ಲೂ ಲಭ್ಯವಾಗಲಿದೆ.

ವಿಶೇಷತೆಗಳು:
4G VoLTE
2.4 ಇಂಚುಗಳ QVGA ಡಿಸ್‌ಪ್ಲೇ,
ಕ್ವಾಲ್ಕಂ ಸ್ನ್ಯಾಪ್‌ಡ್ರಾಗನ್ 205 ಪ್ರೊಸಸರ್,
ಡ್ಯುಯಲ್ ಸಿಮ್,
ಮೈಕ್ರೋಮ್ಯಾಕ್ಸ್ ಎಂಟರ್ಟೈನ್ಮೆಂಟ್ ಆ್ಯಪ್

ಸ್ಟೋರೆಜ್:
512MB RAM
4GB ಇಂಟರ್ನಲ್ ಸ್ಟೋರೆಜ್

ಬ್ಯಾಟರಿ: 2000mAh

ಕ್ಯಾಮೆರಾ:
2MP ರಿಯರ್
VGA ಸೆಲ್ಫಿ ಕ್ಯಾಮೆರಾ

ಮೈಕ್ರೋಮ್ಯಾಕ್ಸ್ ನೂತನ ಭಾರತ್ 1 ಫೋನ್, ಏರ್‌ಟೆಲ್ ಹಾಗೂ ಕಾರ್ಬನ್ ಮತ್ತು ರಿಲಯನ್ಸ್ ಜಿಯೋದ ಫೋನ್‌ಗೆ ಪ್ರತಿಸ್ಪರ್ಧೆಯನ್ನು ಒಡ್ಡಲಿದೆ.

Comments are closed.