ಉಡುಪಿ: ಇತ್ತೀಚಿಗೆ ಸಚಿವ ರೋಶನ್ ಬೇಗ್ ಪ್ರದಾನಿ ಮೋದಿ ವಿರುದ್ದ ಅವಹೇಳನ ಕಾರಿಯಾಗಿ ಮಾತನಾಡಿದ್ದು ಈ ಹಿನ್ನಲೆಯಲ್ಲಿ ಸಚಿವ ಬೇಗ್ ರನ್ನು ಸಚಿವ ಸಂಪುಟದಿಂದ ವಜಾ ಮಾಡಬೇಕು ಎಂದು ಆಗ್ರಹಿಸಿ ಉಡುಪಿಯಲ್ಲಿ ಬಿಜೆಪಿ ವತಿಯಿಂದ ಹೆದ್ದಾರಿ ತಡೆ ನಡೆಯಿತು.
ಅಂಬಲಪಾಡಿ ಹೆದ್ದಾರಿ ಬಳಿ ಪ್ರತಿಭಟನೆ ನಡೆಸಿದ ಬಿಜೆಪಿ ಕಾರ್ಯಕರ್ತರು ರೋಶನ್ ಬೇಗ್ ವಿರುದ್ದ ಧಿಕಾರ ಕೂಗಿದರು. ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ್ ಹೆಗ್ಡೆ ಮಾತನಾಡಿ ಎಲುಬಿಲ್ಲದ ನಾಲಗೆಯಂತೆ ಮಾತನಾಡಿರುವ ರೋಶನ್ ಬೇಗ್ ಅವರನ್ನು ಸಚಿವ ಸಂಪುಟದಿಂದ ವಜಾಮಾಡಬೇಕು ಎಂದು ಆಗ್ರಹ್ಸಿದರು. ಹೆದ್ದಾರಿ ತಡೆ ನಡೆಸಿ ಪ್ರತಿಭಟಿಸಿದ ಬಿಜೆಪಿ ಕಾರ್ಯಕರ್ತರನ್ನು ಬಂಧಿಸಲಾಯಿತು.
Comments are closed.