ಕರಾವಳಿ

ಬೈಕ್- ಖಾಸಗಿ ಬಸ್ ಅಪಘಾತ: ಚಿತ್ರಕಲಾ ಶಿಕ್ಷಕ ದಾರುಣ ಸಾವು

Pinterest LinkedIn Tumblr

ಕುಂದಾಪುರ: ಖಾಸಗಿ ಬಸ್ ಹಾಗೂ ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ಕೋಟೇಶ್ವರ ಸರಕಾರಿ ಪದವಿ ಪೂರ್ವ ಕಾಲೇಜಿನ ಚಿತ್ರಕಲಾ ಶಿಕ್ಷಕ ಭೋಜ ಹಾಂಡ (51) ಗಂಭೀರ ಗಾಯಗೊಂಡು ಮೃತಪಟ್ಟು, ಹಿಂಬದಿ ಸವಾರೆ ಅರ್ಪಿತಾ (11) ಎನ್ನುವಾಕೆ ಸಣ್ಣಪುಟ್ಟ ಗಾಯಗಳಾಗಿ ಖಾಸಗಿ ಆಸ್ಪತ್ರೆಗೆ ದಾಖಲಾದ ಘಟನೆ ತಾಲೂಕಿನ ಹೆಮ್ಮಾಡಿ ಬೈಪಾಸ್ ಸಮೀಪ ನಡೆದಿದೆ.

ಭೋಜ ಹಾಂಡ ಅವರು ಯೋಗಶಿಕ್ಷಣ ತರಬೇತಿ ನಡೆಸುತ್ತಿದ್ದು ಶನಿವಾರ ಬೆಳಿಗ್ಗೆ ಯೋಗ ತರಬೇತಿ ನಡೆಸುವುದಕ್ಕಾಗಿ ಹೆಮ್ಮಾಡಿಯಿಂದ ಕಟ್‌ಬೆಲ್ತೂರಿಗೆ ತೆರಳಲು ಹೆಮ್ಮಾಡಿ ಬೈಪಾಸ್ ದಾಟುತ್ತಿದ್ದ ಸಂದರ್ಭದಲ್ಲಿ ಖಾಸಗಿ ಬಸ್ ಬೈಕಿಗೆ ಡಿಕ್ಕಿ ಹೊಡೆದಿತ್ತು. ಘಟನೆಯಲ್ಲಿ ಭೋಜ ಹಾಂಡ ಅವರಿಗೆ ಗಂಭೀರ ಗಾಯಗಳಾಗಿತ್ತು. ಕೂಡಲೇ ಅವರನ್ನು ಸ್ಥಳೀಯ ಆಸಪ್ತ್ರೆಗೆ ದಾಖಲಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಅವರು ಚಿಕಿತ್ಸೆ ಫಲಕಾರಿಯಾಗದೇ ಮಧ್ಯಾಹ್ನದ ಸುಮಾರಿಗೆ ಮೃತಪಟ್ಟಿದ್ದಾರೆ. ಯೋಗ ತರಬೇತಿಗಾಗಿ ಅವರೊಂದಿಗೆ ಬೈಕಿನಲ್ಲಿ ತೆರಳುತ್ತಿದ್ದ ಅರ್ಪಿತಾಳಿಗೂ ಸಣ್ಣಪುಟ್ಟ ಗಾಯಗಳಾಗಿದ್ದು ಕುಂದಾಪುರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕುಂದಾಪುರ ಸಂಚಾರಿ ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Comments are closed.