ಅಂತರಾಷ್ಟ್ರೀಯ

ಕತ್ತಲೆಯಲ್ಲಿ ಗಡಿ ದಾಟಿ ಬಂದು ಕಳೆದ ಐದು ದಶಕಗಳಿಂದ ಭಾರತದಲ್ಲಿ ಸಿಕ್ಕಿಹಾಕಿಕೊಂಡಿದ್ದ ಸೈನಿಕ ತವರು ಸೇರಿದ !

Pinterest LinkedIn Tumblr

ಬೀಜಿಂಗ್: ಕತ್ತಲೆಯಲ್ಲಿ ಗಡಿ ದಾಟಿ ಬಂದು ಕಳೆದ ಐದು ದಶಕಗಳಿಂದ ಭಾರತದಲ್ಲಿ ಸಿಕ್ಕಿಹಾಕಿಕೊಂಡಿದ್ದ ಸೈನಿಕಕೊಬ್ಬರು ಇಂದು ಚೀನಾ ಸೇರಿದ್ದಾರೆ.

1962ರಲ್ಲಿ ಗಡಿ ದಾಟಿ ಭಾರತಕ್ಕೆ ಬಂದಿದ್ದ ವಾಂಗ್ ಕೀ ಚೀನಾ ಸೈನಿಕ ತಮ್ಮ ಕುಟುಂಬಸ್ಥರ ಜೊತೆ ಬೀಜಿಂಗ್ ತಲುಪಿದ್ದಾರೆ. ಸತತ ಐದು ದಶಕಗಳ ನಂತರ ತವರಿಗೆ ಮರಳಿ ತಮ್ಮ ಬಂಧು ಬಾಂಧವರು ಹಾಗೂ ಸ್ನೇಹಿತರನ್ನು ಮರಳಿ ಸೇರಿದ್ದಾರೆ.

ಚೀನಾ ವಿದೇಶಾಂಗ ಸಚಿವಾಲಯ ಮತ್ತು ಭಾರತೀಯ ರಾಯಭಾರ ಕಚೇರಿಯ ಅಧಿಕಾರಿಗಳ ಸಮ್ಮುಖದಲ್ಲಿ ತಮ್ಮ ಭಾರತೀಯ ಮೂಲದ ಪತ್ನಿ ಹಾಗೂ ಮಗ ಹಾಗೂ ಸೊಸೆಯೊಂದಿಗೆ ದೆಹಲಿ -ಬೀಜಿಂಗ್ ವಿಮಾನದಲ್ಲಿ ತಲುಪಿದ್ದಾರೆ.

ವಾಂಗ್ ತನ್ನ ಪುತ್ರ ವಿಷ್ಣುವಾಂಗ್, ಸೊಸೆ ನೇಹಾ, ಮೊಮ್ಮಗಳಾದ ಕನಕ್ ವಾಂಗ್ ಹಾಗೂ ಪತ್ನಿ ಸುಶೀಲಾ ಜೊತೆ ಬೀಜಿಂಗ್ ತಲುಪಿ ಸಂಬಂಧಿಕರ ಜೊತೆ ಸೇರಿದ ಕ್ಷಣ ಭಾವನಾತ್ಮಕವಾಗಿತ್ತು. ಭಾರತ ಮತ್ತು ಚೀನಾ ಸರ್ಕಾರಗಳ ಪ್ರಯತ್ನದ ಫಲವಾಗಿ ವಾಂಗ್ ಚೀನಾ ಸೇರಿದ್ದಾರೆ.

1960 ರಲ್ಲಿ ಚೀನಾ ಸೇನೆ ಸೇರಿದ ವಾಂಗ್ ತೀ 1962 ರಲ್ಲಿ ವಾಂಗ್ ಕೀ ಕತ್ತಲಲ್ಲಿ ಚೀನಾ ಗಡಿ ದಾಟಿ ಭಾರತಕ್ಕೆ ಬಂದಿದ್ದರು. ನಂತರ ಭಾರತೀಯ ಸೇನೆಯಿಂದ ಬಂಧಿಸಲ್ಪಟ್ಟು 6 ವರ್ಷಗಳ ಕಾಲ ಅಸ್ಸಾಂ ಕಾರಾಗೃಹದಲ್ಲಿಡಲಾಗಿತ್ತು. ನಂತರ ಪಂಜಾಬ್ ಮತ್ತು ಹರ್ಯಾಣ ಕೋರ್ಟ್ ಆದೇಶದಂತೆ 1969ರ ಮಾರ್ಚ್ ನಲ್ಲಿ ವಾಂಗ್ ಕೀ ಅವರನ್ನು ಬಿಡುಗಡೆ ಮಾಡಲಾಯಿತು.

ಬಿಡುಗಡೆ ನಂತರ ಮಧ್ಯಪ್ರದೇಶದ ಬಾಲ್ಘಾಟ್ ಜಿಲ್ಲೆಯ ತಿರೋಡಿ ಗ್ರಾಮದಲ್ಲಿ ವಾಸಿಸಲು ಆರಂಭಿಸಿದರು. ಇವರ ಕಥೆಯನ್ನು ಹಲವು ಬಾರಿ ಮಾಧ್ಯಮಗಳಲ್ಲಿ ಪ್ರಕಟಿಸಲಾಯಿತು. ಇತ್ತೀಚೆಗೆ ಬಿಬಿಸಿ ಟಿವಿ ವ್ಯಕ್ತಿ ಚಿತ್ರ ತಯಾರಿಸಿ ಬಿತ್ತರಿಸಿತ್ತು. ಇದು ಚೀನಾದಾ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು. ಈ ವೇಳೆ ವಾಪಸ್ ಕರೆಸಿಕೊಳ್ಳಲು ಪ್ರಯತ್ನಿಸುವುದಾಗಿ ಚೀನಾ ಸರ್ಕಾರ ಭರವಸೆ ನೀಡಿತ್ತು.

2013 ಫೆಬ್ರವರಿ 6 ರಂದು ಚೀನಾ ವಿದೇಶಾಂಗ ಸಚಿವಾಲಯ ವಾಂಗ್ ಗೆ ಚೀನಾಗೆ ಬರಲು ಅನುಮತಿ ನೀಡಿ ಜೀವನಾಂಶ ನೀಡುವುದಾಗಿ ತಿಳಿಸಿತ್ತು. ಇತ್ತೀಚೆಗೆ ವಾಂಗ್ ಜೊತೆ ಚರ್ಚಿಸಿದ ಚೀನಾ ಸರ್ಕಾರ ವಾಂಗ್ ಕುಟುಂಬ ಚೀನಾ ಗೆ ಬರಲು ವೀಸಾ ಕೊಡಲಿದೆ, ಆದರೆ ಆತ ಬಯಸಿದಾಗ ವಾಪಸ್ ಭಾರತಕ್ಕೆ ಮರಳಲು ಭಾರತ ಸರ್ಕಾರ ರಿ ಎಂಟ್ರಿ ವೀಸಾ ನೀಡಬೇಕೆಂದು ಹೇಳಿತ್ತು. ಎರಡು ಸರ್ಕಾರಗಳಿಂದ ಸಕರಾತ್ಮಕ ಬೆಳವಣಿಗೆಗಳಿಂದಾಗಿ ವಾಂಗ್ ತವರಿಗೆ ಮರಳಿದ್ದಾರೆ.

Comments are closed.