ಮಂಗಳೂರು / ಕೊಣಾಜೆ , ಫೆಬ್ರವರಿ. 5 : ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ ಆಶ್ರಯದಲ್ಲಿ ಕೊಣಾಜೆ ಸಮೀಪದ ಅಸೈಗೋಳಿ ಕೇಂದ್ರ ಮೈದಾನದಲ್ಲಿ ಹಮ್ಮಿಕೊಂಡಿರುವ ವೀರರಾಣಿ ಅಬ್ಬಕ್ಕ ಉತ್ಸವ ಪ್ರಯುಕ್ತ ಶನಿವಾರ ದೇರಳಕಟ್ಟೆಯಿಂದ ಅಸೈಗೋಳಿಯ ಉತ್ಸವ ವೇದಿಕೆಯವರೆಗೆ ಜಾನಪದ ದಿಬ್ಬಣ ಮೆರವಣಿಗೆ ವಿಜೃಂಭಣೆಯಿಂದ ಜರಗಿತು.
ಜಾನಪದ ದಿಬ್ಬಣದ ಉದ್ಘಾಟನೆಯನ್ನು ಸಚಿವ ಯು.ಟಿ.ಖಾದರ್ ಅವರು ನೆರವೇರಿಸಿದರು .
ಮೆರವಣಿಗೆಯು ಪೂರ್ಣಕುಂಭ ಕಲಶದೊಂದಿಗೆ, ಕೀಲು ಕುದುರೆ, ಕರಗಕುಣಿತ, ಗೊಂಬೆಗಳು, ಬ್ಯಾಂಡ್ಸೆಟ್, ಚೆಂಡೆ, ಕಂಗೀಲು, ಡೊಳ್ಳುಕುಣಿತ, ಪಟಕುಣಿತ, ವೀರಗಾಸೆ, ಸುಗ್ಗಿಕುಣಿತ, ಯಕ್ಷಗಾನ, ಹಾಲಕ್ಕಿ ಕುಣಿತ, ಸಂಸಾಲೆ ನೃತ್ಯ, ಅಬ್ಬಕ್ಕನ ಟ್ಯಾಬ್ಲೋದೊಂದಿಗೆ ಆಕರ್ಷಕವಾಗಿ ನಡೆಯಿತು.ಬಳಿಕ ವೇದಿಕೆಯಲ್ಲಿ ವಿವಿಧ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
Comments are closed.