ಕರಾವಳಿ

ಸಂಘ ಸಂಸ್ಥೆಗಳ ಸಭೆ ಸಮಾರಂಭಗಳಿಂದ ಮಕ್ಕಳ ವ್ಯಕ್ತಿತ್ವ ವಿಕಸನ

Pinterest LinkedIn Tumblr

ಗೆಳೆಯರ ಬಳಗ ಇತ್ಯಾದಿ ಸಂಘ ಸಂಸ್ಥೆಗಳು ನಡೆಸುವ ಸಭೆ ಸಮಾರಂಭಗಳಲ್ಲಿ ಪಾಲ್ಗೊಳ್ಳುವುದು ಅಥವಾ ತಮ್ಮನ್ನು ತೊಡಗಿಸುವುದು ಮಕ್ಕಳ ವ್ಯಕ್ತಿತ್ವ ವಿಕಸಕ್ಕೆ ಬಹಳಷ್ಟು ಸಹಕಾರಿಯಾಗುವುದು ಎಂದು ರೋಟರಿ ಕ್ಲಬ್ ಮಣಿಪಾಲ ಟೌನ್ ಇದರ ಅಧ್ಯಕ್ಷ ರೋ. ಸಚ್ಚಿದಾನಂದ ನಾಯಕ್ ಇವರು ಕೋಟ್ನಕಟ್ಟೆ ಫ್ರೆಂಡ್ಸ್ ಸರ್ಕಲ್ ನ ರಜತ ಸಂಭ್ರಮದ ಎರಡನೇ ದಿನದ “ಸಾಂಸ್ಕೃತಿಕ ಸಂಜೆ” ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡುತ್ತಾ ಹೇಳಿದರು. ಸಭೆಯ ಅಧ್ಯಕ್ಷತೆಯನ್ನು ರಾಜ್ಯ ಪ್ರಶಸ್ತಿ ವಿಜೇತ ನಿವೃತ್ತ ಮುಖ್ಯೋಪಾದ್ಯಾಯ ಮಲ್ಪೆ ರಾಘವೇಂದ್ರ ಇವರು ವಹಿಸಿದ್ದರು.

ಸಮಾರಂಭದಲ್ಲಿ “ನೃತ್ಯ ವಿದುಷಿ” ಕು| ಶ್ರಾವ್ಯ ಇವರನ್ನು ಅಭಿನಂದಿಸಲಾಯಿತು. ಅನುಷಾ ಮತ್ತು ದಿವ್ಯ ಮರಾಠೆ ಇವರುಗಳ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮಕ್ಕೆ ಸಂಘದ ಅಧ್ಯಕ್ಷ ದಿವಾಕರ ಭಂಡಾರಿ ಸ್ವಾಗತಿಸಿ, ಶ್ರೀಪತಿ ಆಚಾರ್ಯ ವಂದಿಸಿದರು. ಬಾಲಕೃಷ್ಣ ಬಿ. ಕೆ ಇವರು ಕಾರ್ಯಕ್ರಮ ನಿರ್ವಹಿಸಿ, ವಿಶ್ವನಾಥ್ ಶೆಟ್ಟಿ, ಸತ್ಯಪ್ರಸಾದ್ ಮತ್ತು ಸುಜಯ ಶೆಟ್ಟಿ ಸಹಕರಿಸಿದರು.

ನಂತರ “ಮಯೂರ” ನೃತ್ಯ ತಂಡದಿಂದ ಭರತ ನಾಟ್ಯ ಮತ್ತು “ಡಿಫೈರ್ಸ್ ಡಾನ್ಸ್ ಕ್ರ್ಯು” ಇವರಿಂದ ಪಾಶ್ಚಾತ್ಯ ನೃತ್ಯ ಪ್ರದರ್ಶಿಸಲಾಯಿತು.

Comments are closed.