ಕರಾವಳಿ

ಪರಿಸರ ಮತ್ತು ಸಂಸ್ಕೃತಿಯ ಉಳಿಸುವಿಕೆಯೊಂದಿಗೆ ಅಭಿವೃದ್ಧಿಯ ಚಿಂತನೆ

Pinterest LinkedIn Tumblr

ಹಿರಿಯಡ್ಕ : ಅದಾನಿ ಉಡುಪಿ ಪವರ್ ಕಾರ್ಪೊರೇಷನ್ ಲಿಮಿಟೆಡ್ ಇದರ ಜಂಟೀ ಅಧ್ಯಕ್ಷರಾದ ಶ್ರೀ ಕಿಶೋರ್ ಆಳ್ವ ಮೂರು ದಿನಗಳ ಕಾಲ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ಜರುಗಿದ ಕೋಟ್ನಕಟ್ಟೆ ಫ್ರೆಂಡ್ಸ್ ಸರ್ಕಲ್ ನ ರಜತ ಸಂಭ್ರಮದ ಸಮಾರೋಪದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುತ್ತ ಯಾವುದೇ ಯೋಜನೆ ಅನುಷ್ಠಾನಗೊಳಿಸುವಾಗ ಪರಿಸರ ಮತ್ತು ಸಂಸ್ಕೃತಿಯ ಉಳಿಸುವಿಕೆಗೆ ಪ್ರಥಮ ಆದ್ಯತೆ ನೀಡಿಲು ಪ್ರಾಮಾಣಿಕ ಪ್ರಯತ್ನ ಪಟ್ಟಲ್ಲಿ ಸಂಪೂರ್ಣ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದು ಹೇಳಿದರು. ಸಮಾರಂಭವು ಸ್ಥಳೀಯ ಉದ್ಯಮಿ ದಯಾನಂದ ಮಲ್ಯ ಇವರ ಅಧ್ಯಕ್ಷತೆಯಲ್ಲಿ ಜರುಗಿತು.

ಇನ್ನೋರ್ವ ಅತಿಥಿ ಸಿಕ್ಕಿಂ ಮಣಿಪಾಲ ವಿಶ್ವವಿದ್ಯಾನಿಲಯದ ಪ್ರಾದ್ಯಾಪಕ ಡಾ. ಮನೋಜ್ ಕುಮಾರ್ ನಾಗಸಂಪಿಗೆ ಉತ್ತಮ ಆರೋಗ್ಯಕ್ಕಾಗಿ ಸಹಜೀವನದ ಪಾತ್ರದ ಬಗ್ಗೆ ಮಾತನಾಡಿದರು. ಪ್ರೇಮಾನಂದ ಪೈ ಶುಭ ಹಾರೈಸಿದರು ಹಾಗು 25ನೇ ವಾರ್ಷಿಕ ಸಮಾರಂಭದ ಪ್ರಯುಕ್ತ ಸಾರ್ವಜನಿಕರಿಗಾಗಿ ನಡೆದ ‘ವಿನೋದ ಕ್ರೀಡಾವಳಿಯ’ ವಿಜೇತರುಗಳಿಗೆ ಬಹುಮಾನವನ್ನು ಸಮಾರಂಭದಲ್ಲಿ ನೀಡಲಾಯಿತು. ಸ್ಥಳೀಯ ಬಾಲವನವನ್ನು ಅಭಿವೃದ್ಧಿಗೊಳಿಸಲು ಯು. ಪಿ. ಸಿ. ಎಲ್ ನ ಸಹಕಾರಕ್ಕಾಗಿ ವಿನಂತಿ ಪತ್ರವನ್ನು ರಾಘವೇಂದ್ರ ಜಿ ವಾಚಿಸಿ ಕಿಶೋರ್ ಆಳ್ವ ಇವರಿಗೆ ನೀಡಿದರು.

ವಿಶೇಷವಾಗಿ ಈ ಸಂಧರ್ಭದಲ್ಲಿ ಜಿಲ್ಲಾ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಮೋಹನ್ ಕಡಬ ಇವರನ್ನು ಪ್ರಶಸ್ತಿಪತ್ರ ನೀಡಿ ಸನ್ಮಾನಿಸಲಾಯಿತು.

ದಿವ್ಯ ಮರಾಠೆ ಮತ್ತು ಚೈತನ್ಯ ಬಳಗದವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮಕ್ಕೆ ಅಧ್ಯಕ್ಷ ದಿವಾಕರ ಭಂಡಾರಿ ಸ್ವಾಗತಿಸಿ, ಕಾರ್ಯದರ್ಶಿ ದೇವದಾಸ ಮರಾಠೆ ವಂದಿಸಿದರು. ಬಾಲಕೃಷ್ಣ ಬಿ. ಕೆ ಇವರು ಕಾರ್ಯಕ್ರಮ ನಿರ್ವಹಿಸಿ, ಶ್ರೀಪತಿ ಆಚಾರ್ಯ, ಖಜಾಂಚಿ ಗುರುನಾಥ ಶೆಟ್ಟಿ, ಪ್ರವೀಣ್ ಮಾಣೈ ಸಹಕರಿಸರು.

ಸಭಾ ಕಾರ್ಯಕ್ರಮಕ್ಕೂ ಮುಂಚೆ ಹಿರಿಯಡಕ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳ ಪ್ರಶಸ್ತಿವಿಜೇತ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗು ಸಭಾ ಕಾರ್ಯಕ್ರಮದ ನಂತರ ಕಲಾಕುಂಭ ಸಾಂಸ್ಕೃತಿಕ ವೇದಿಕೆ ಕುಳಾಯಿ ಇವರಿಂದ “ತುಳುನಾಡು ಸಂಸ್ಕೃತಿ” ಪ್ರದರ್ಶಿಸಲಾಯಿತು.

Comments are closed.