ಕರಾವಳಿ

ಮನೆಗೆ ನುಗ್ಗಿ ಚಿನ್ನಾಭರಣ ಕಳವುಗೈದ ನಟೋರಿಯಸ್ ಆರೋಪಿಗಳು ಅಂದರ್

Pinterest LinkedIn Tumblr

ಉಡುಪಿ: ಜನವರಿ 30ರಂದು ಬ್ರಹ್ಮಾವರ ಪೊಲೀಸ್ ಠಾಣಾ ಸರಹದ್ದಿನ ಬಾರ್ಕೂರು ಮಸ್ಕಿಬೈಲು ಎಂಬಲ್ಲಿ ಬೀಗ ಹಾಕಿದ್ದ ಮನೆಯ ಬಾಗಿಲು ಒಡೆದು ಒಳಪ್ರವೇಶಿಸಿ ಚಿನ್ನಾಭರಣ ಕಳವು ಮಾಡಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಇವರ ಪೈಕಿ ಇಬ್ಬರು ಅಪ್ರಾಪ್ತರು. ಸಾಸ್ತಾನ ಐರೋಡಿ ನಿವಾಸಿ ಪ್ರಹ್ಲಾದ ಪೂಜಾರಿ (23), ಸಾಸ್ತಾನ ಗುಂಡ್ಮಿ ನಿವಾಸಿ ಪ್ರಶಾಂತ ಜಿ (24) ಹಾಗೂ ಇಬ್ಬರು ಕಾನೂನಿನ ಸಂಘರ್ಷಕ್ಕೊಳಗಾದ ಬಾಲಕರನ್ನು ಬಂಧಿಸಲಾಗಿದೆ.

ಆರೋಪಿತರು ಕಳವು ಮಾಡಿದ್ದ ಚಿನ್ನದ ಚೈನ್, ಬ್ರಾಸ್‌ಲೆಟ್, ಉಂಗುರ, ಒಂದು ಜೊತೆ ಕಿವಿಗೆ ಧರಿಸುವ ಟಿಕ್ಕಿ, ನಗದು ಹಣ 2,560/- ರೂಪಾಯಿ ಹಾಗೂ ಕೃತ್ಯಕ್ಕೆ ಬಳಸಿದ ಕಾರನ್ನು ಸ್ವಾಧೀನಪಡಿಸಿಕೊಳ್ಳಲಾಗಿದ್ದು ಈ ಚಿನ್ನಾಭರಣಗಳ ಒಟ್ಟು ತೂಕ 19.420 ಗ್ರಾಂ (ಅಂದಾಜು ಮೌಲ್ಯ 58,000/- ರೂಪಾಯಿ) ಹಾಗೂ ನಗದು 2,560/- ರೂಪಾಯಿ, ಕಾರಿನ ಮೌಲ್ಯ 5 ಲಕ್ಷ ರೂಪಾಯಿ ಆಗಿದೆ.

ಇಬ್ಬರು ನಟೋರಿಯಸ್ ಆರೋಪಿಗಳು…
ಆರೋಪಿ ಪ್ರಹ್ಲಾದ ಪೂಜಾರಿ ಈ ಹಿಂದೆ ಕೊಟೇಶ್ವರದಲ್ಲಿ ಮಹಿಳೆಯ ಸರಗಳ್ಳತನ ಮಾಡಿದ್ದು ಅಲ್ಲದೇ ತನ್ನ ಮನೆಯಲ್ಲಿಯೇ ಕೂಡಾ ಕಳ್ಳತನ ಮಾಡಿರುತ್ತಾನೆ. ಈ ಬಗ್ಗೆ ಕುಂದಾಪುರ ಹಾಗೂ ಕೋಟ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದ್ದು, ಈ ಎರಡೂ ಪ್ರಕರಣಗಳು ಕುಂದಾಪುರ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುತ್ತದೆ. ಅಲ್ಲದೇ ಆರೋಪಿ ಪ್ರಶಾಂತನು ಪ್ರಹ್ಲಾದ ಪೂಜಾರಿಯೊಂದಿಗೆ ಸೇರಿ ಕೊಟೇಶ್ವರದಲ್ಲಿ ಮಹಿಳೆಯ ಸರಗಳ್ಳತನ ಮಾಡಿರುತ್ತಾನೆ, ಈ ಇಬ್ಬರು ಹಳೆ ಆರೋಪಿಗಳಾಗಿರುತ್ತಾರೆ.

ಉಡುಪಿ ಜಿಲ್ಲಾ ಎಸ್ಪಿ ಕೆ.ಟಿ.ಬಾಲಕೃಷ್ಣ ನಿರ್ದೇಶನದಲ್ಲಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎನ್.ವಿಷ್ಣುವರ್ಧನ, ಉಡುಪಿ ಉಪ-ವಿಭಾಗದ ಪೊಲೀಸ್ ಉಪಾಧೀಕ್ಷಕ ಎಸ್.ಜೆ ಕುಮಾರಸ್ವಾಮಿ ಮಾರ್ಗದರ್ಶನದಲ್ಲಿ, ಡಿ.ಸಿ.ಐ.ಬಿ ಇನ್ಸ್‌ಪೆಕ್ಟರ್ ಸಂಪತ್ ಕುಮಾರ್ ಹಾಗೂ ಡಿ.ಸಿ.ಐ.ಬಿ ಘಟಕದ ಎ.ಎಸ್.ಐ. ರೊಸಾರಿಯೊ ಡಿ’ಸೋಜ ಮತ್ತು ಸಿಬ್ಬಂದಿಯವರಾದ ರವಿಚಂದ್ರ, ಚಂದ್ರ ಶೆಟ್ಟಿ, ರಾಮು ಹೆಗ್ಡೆ, ಸಂತೋಷ ಕುಂದರ್, ಸುರೇಶ ಕೆ, ರಾಘವೇಂದ್ರ ಉಪ್ಪುಂದ, ಪ್ರವೀಣ, ಶಿವಾನಂದ, ರಾಜ್‌ಕುಮಾರ್, ದಯಾನಂದ ಪ್ರಭು, ಚಾಲಕ ರಾಘವೇಂದ್ರ ಮತ್ತು ಆಧುನಿಕ ತಂತ್ರಜ್ಞಾನ ವಿಭಾಗದ ಎಎಸ್‌ಐ ಅಚ್ಯುತ, ಸಿಬ್ಬಂದಿಯವರಾದ ವಿಜಯ ಕುಮಾರ್ ಮತ್ತು ರಮೇಶ ನಾಯ್ಕ ಈ ಕಾರ್ಯಾಚರಣೆಯಲ್ಲಿ ಪಾಲ್ಘೊಂಡಿದ್ದರು.

Comments are closed.