ಮಂಗಳೂರು, ಫೆ. 4: ಹಿರಿಯ ಕಮ್ಯೂನಿಸ್ಟ್ ನೇತಾರ, ಭಾರತ ಕಮ್ಯುನಿಸ್ಟ್ ಪಕ್ಷ (ಸಿಪಿಐ)ದ ಕರ್ನಾಟಕ ರಾಜ್ಯ ಮಾಜಿ ಕಾರ್ಯದರ್ಶಿ ಹಾಗೂ ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ಕಾಮ್ರೇಡ್ ಸಿಂಪ್ಸನ್ ಸೋನ್ಸ್‌ರವರ ಪತ್ನಿ 94 ವರ್ಷ ಪ್ರಾಯದ ಶ್ರೀಮತಿ ಇವಾಂಜಲಿನ್ ಸಾರ ಸೋನ್ಸ್‌ರವರು ಅಲ್ಪ ಕಾಲದ ಅಸ್ವಸ್ಥೆಯ ನಂತರ ಶುಕ್ರವಾರ ಬೆಳಿಗ್ಗೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.
ಅವರು ಮೂವರು ಗಂಡು ಮಕ್ಕಳು, ಸೊಸೆಯಂದಿರು, ಮೊಮ್ಮಕ್ಕಳು ಹಾಗೂ ಅಪಾರ ಬಂಧು ಬಳಗದವರನ್ನು ಅಗಲಿದ್ದಾರೆ.
ಕಾ| ಸಿಂಪ್ಸನ್ ಸೋನ್ಸ್ ರವರು ಸುಮಾರು ಹನ್ನೊಂದು ವರ್ಷದ ಹಿಂದೆ ಅಗಲಿದ್ದರು.
ಸ್ವಾತಂತ್ರ್ಯ ಸಂಗ್ರಾಮದೊಂದಿಗೆ ಕಾರ್ಮಿಕ ಚಳವಳಿಯಲ್ಲಿ ನಿರತರಾಗಿದ್ದ ಸಿಂಪ್ಸನ್ ಸೋನ್ಸ್‌ರಿಗೆ ಸರ್ವ ವಿಧದಲ್ಲೂ ಸಹಕರಿಸಿದ ಸಂಗಾತಿಯಾಗಿದ್ದರು ಶ್ರೀಮತಿ ಇವಾಂಜಲಿನ್ ಸಾರಾ ಸೋನ್ಸ್. ಇಂದು ಸಂಜೆ ನಾಲ್ಕು ಗಂಟೆಗೆ ಮಂಗಳೂರಿನ ಗೋರಿಗುಡ್ಡೆ ಸೆಮೆಟ್ರಿಯಲ್ಲಿ ಅಂತ್ಯ ಸಂಸ್ಕಾರ ನಡೆಸಲಾಗುವುದು ಎಂದು ಅವರ ಕುಟುಂಬಸ್ಥರು ತಿಳಿಸಿದ್ದಾರೆ.
ಮೃತರ ಅಗಲಿಕೆಗೆ ಭಾರತ ಕಮ್ಯುನಿಸ್ಟ್ ಪಕ್ಷದ ದ.ಕ ಮತ್ತು ಉಡುಪಿ ಜಿಲ್ಲಾ ಕಾರ್ಯದರ್ಶಿ ವಿ. ಕುಕ್ಯಾನ್, ಜಿಲ್ಲಾ ನಾಯಕರುಗಳಾದ ಬಿ. ವಿಶ್ವನಾಥ ನಾಯ್ಕ್, ಬಿ.ಕೆ ಕೃಷ್ಣಪ್ಪ, ಪಿ. ಸಂಜೀವ, ಎಐಟಿಯುಸಿ ಜಿಲ್ಲಾಧ್ಯಕ್ಷ ಕೆ.ವಿ ಭಟ್, ಕಾರ್ಯದರ್ಶಿ ಹೆಚ್.ವಿ ರಾವ್, ಸಿಪಿಐ ಮಂಗಳೂರು ಕಾರ್ಯದರ್ಶಿ ವಿ.ಎಸ್ ಬೇರಿಂಜ, ಸಿಪಿಐ ಬಂಟ್ವಾಳ ಕಾರ್ಯದರ್ಶಿ ಬಿ. ಶೇಖರ್, ಪಕ್ಷದ ನಾಯಕರುಗಳಾದ ಎಂ.ಕರುಣಾಕರ್, ಸುರೇಶ್ ಕುಮಾರ್, ಶಿವಪ್ಪ ಕೋಟ್ಯಾನ್ ಮುಂತಾದವರು ಸಂತಾಪ ಸೂಚಿಸಿದ್ದಾರೆ.
Comments are closed.