ಕರಾವಳಿ

ಕೆಲಸ ಕೊಡಿಸುವುದಾಗಿ ಯುವತಿಗೆ 4 ಲಕ್ಷ ನಾಮ ಹಾಕಿ ತಲೆಮರೆಸಿಕೊಂಡ ಕೊಕ್ಕರ್ಣೆಯ ಯುವಕ

Pinterest LinkedIn Tumblr

ಉಡುಪಿ: ಆಕೆ ಉದ್ಯೋಗ ಅರಸುತ್ತಿದ್ದ ವಿದ್ಯಾವಂತೆ ಯುವತಿ. ಆತ ಯಾರಿಂದ ಹೇಗೆ ಕಾಸು ಹೊಡೀಬಹುದು ಅಂತ ಹೊಂಚು ಹಾಕುತ್ತಿದ್ದ ಯುವಕ. ಒಂದು ವರ್ಷದ ಹಿಂದೆ ಅವರಿಬ್ಬರಿಗೆ ಫೇಸ್ ಬುಕ್‌ನಲ್ಲಿ ಪರಿಚಯವಾಗಿ ಗೆಳೆತನವಾಯ್ತು. ಆತ ಹೂಡಿದ ಹಳ್ಳಕ್ಕೆ ಆಕೆ ಬಿದ್ದೇಬಿಟ್ಟಳು. ನಾಲ್ಕು ಲಕ್ಷ ಕಳೆದುಕೊಂಡಳು.

ಈಕೆ ಅಕ್ಷತಾ. ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಶಂಕರನಾರಾಯಣದವಳು. ಈತ ಕೊಕ್ಕರ್ಣೆ ಗ್ರಾಮದ ಆದರ್ಶ. ಆಕೆಗೆ ಕೆಲಸ ಕೊಡಿಸುತ್ತೇನೆ. ಲೈಫ್ ಸೆಟ್ಲ್ ಮಾಡಿಸ್ತೇನೆ ಅಂತ ಬರೋಬ್ಬರಿ 3 ಲಕ್ಷದ 95 ಸಾವಿರ ರೂಪಾಯಿ ಪೀಕಿಸಿದ್ದಾನೆ. ಮೆಕ್ಯಾನಿಕಲ್ ಡಿಪ್ಲಮೋ ಮಾಡಿರುವ ಅಕ್ಷತಾ ಉದ್ಯೋಗಕ್ಕಾಗಿ ಅರಸುತ್ತಿದ್ದಳು. ಕೆಲಸ ಕೊಡಿಸುವುದಾಗಿ ಹೇಳಿದ ಆದರ್ಶ್ 5 ಸಾವಿರ, 10 ಸಾವಿರ, 30 ಸಾವಿರ- 65 ಸಾವಿರ ರೂಪಾಯಿ ಅಂತ ಹಂತಹಂತವಾಗಿ ಹಣ ಪೀಕಿಸಿದ್ದಾನೆ.

ಕಷ್ಟ ಇದೆ ಅಂತ ಹೇಳಿ ಹಣ ತೆಗೆದುಕೊಂಡು, ಅತ್ತ ಕೆಲಸವೂ ಕೊಡಿಸದೆ, ಇತ್ತ ಕಾಸನ್ನೂ ವಾಪಾಸ್ ನೀಡದೆ ಇದೀಗ ಫೋನ್ ಸ್ವಿಚ್ ಆಫ್ ಮಾಡಿದ್ದಾನೆ. ಆರು ತಿಂಗಳು ಕಾದು ಇದೀಗ ಶಂಕರನಾರಾಯಣ ಪೊಲೀಸರಿಗೆ ದೂರು ನೀಡಿದ್ದಾಳೆ. ಪೊಲೀಸರು ಎಫ್‌ಐ‌ಆರ್ ದಾಖಲಿಸಿಕೊಂಡು ಆರೋಪಿಗಾಗಿ ಹುಡುಕಾಟ ನಡೆಸಿದ್ದಾರೆ. ಆದರ್ಶ ಗೆಳೆಯರಿಗೂ ಸಿಗುತ್ತಿಲ್ಲವಂತೆ.

ಬರೀ ಅಕ್ಷತಾಳಿಗಾದ ಮೋಸ ಅಲ್ಲ. ಹೀಗೆ ಎಂಟತ್ತು ಯುವತಿಯರಿಗೆ ಮೋಸವಾಗಿದ್ಯಂತೆ. ಕೆಲಸದ ಆಮಿಷದ ಜೊತೆ ಮದುವೆಯಾಗುವುದಾಗಿ ಹೇಳಿಕೊಂಡಿದ್ದ. ಆದ್ರೆ ಯಾರೂ ಮುಂದೆ ಬಂದು ದೂರು ನೀಡುತ್ತಿಲ್ಲ.

Comments are closed.