ಉಡುಪಿ: ತನ್ನ ಆರು ವರ್ಷ ಪ್ರಾಯದ ಮಗನೊಂದಿಗೆ ಮಹಿಳೆ ಮನೆಬಿಟ್ಟು ಹೋದ ಘಟನೆ ಉಡುಪಿ ತಾಲೂಕಿನ ಪೆರಂಪಳ್ಳಿಯಲ್ಲಿ ನಡೆದಿದೆ. ವಿದ್ಯಾಲಕ್ಷ್ಮಿ (39) ರವರು ಮಗ ಅಂಶುಲ್ (6) ಎನ್ನುವವರೇ ಕಾಣೆಯಾದವರು.

ಪೆರಂಪಳ್ಳಿಯ ನಿವಾಸದಿಂದ ಹೊರಟ ವಿದ್ಯಾಲಕ್ಷ್ಮೀ ತನ್ನ ಮಗ ಅಂಶುಲ್ ಎಂಬಾತನನ್ನು ಶಾಲೆಯಿಂದ ಕರೆದುಕೊಂಡು ತೆರಳಿದ್ದು ಈ ಇಬ್ಬರೂ ಮನೆಗೂ ವಾಪಾಸ್ ಬಾರದೇ, ಸಂಬಂಧಿಕರ ಮನೆಗೂ ಹೋಗದೇ ಕಾಣೆಯಾಗಿದ್ದಾರೆ. ಈ ಬಗ್ಗೆ ವಿದ್ಯಾಲಕ್ಷ್ಮೀ ಅವರ ಪತ್ನಿ ಪ್ರವೀಣಚಂದ್ರ ಅವರು ಮಣಿಪಾಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಕಾಣೆಯಾದವರ ವಿವರ:
ವಿದ್ಯಾಲಕ್ಷ್ಮಿ (39), ಸಾಧಾರಣ ಶರೀರ, ಬಿಳಿ ಮೈಬಣ್ಣ, ಜೀನ್ಸ್ ಪ್ಯಾಂಟ್ & ಟಾಫ್ ಧರಿಸಿರುತ್ತಾರೆ. ಕನ್ನಡ, ತುಳು, ಹಿಂದಿ, ಇಂಗ್ಲೀಷ್ ಭಾಷೆ ಬಲ್ಲವರಾಗಿರುತ್ತಾರೆ. ಅಂಶುಲ್ (6) ಸಪೂರ ಶರೀರ, ನೀಲಿ ಶಾಟ್ಸ್, ಆಕಾಶ ನೀಲಿ ಬಣ್ಣದ ಶರ್ಟ್, ತುಳು, ಇಂಗ್ಲೀಷ್ ಭಾಷೆ ತಿಳಿದಿರುತ್ತಾರೆ.
Comments are closed.