ಉಡುಪಿ: ಸಿಎಂ ವಿರುದ್ಧ ಪೂಜಾರಿ ವಾಗ್ದಾಳಿ ವಿಚಾರ ಜನಾರ್ದನ ಪೂಜಾರಿ ಪಕ್ಷದಲ್ಲಿ ದೊಡ್ಡ ಸ್ಥಾನದಲ್ಲಿದ್ದಾರೆ. ಹಿರಿಯರು ಗೌರವದಿಂದ ನಡೆದುಕೊಳ್ಳಬೇಕು ಕೆಪಿಸಿಸಿ ಕಾರ್ಯಾದ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದರು.

ಉಡುಪಿಯಲ್ಲಿ ಮಾಧ್ಯಮಗಳ ಜೊತೆ ಮಾತಾನಾಡಿ ಸಿಎಂ ವಿರುದ್ಧ ಪೂಜಾರಿ ವಾಗ್ದಾಳಿಯ ಎಲ್ಲಾ ವಿಚಾರಗಳನ್ನು ಎಐಸಿಸಿ ಗಮನಕ್ಕೆ ತಂದಿದ್ದೇವೆ .ಈ ರೀತಿ ಹೇಳಿಕೆ ಕೊಡಬಾರದು ಎಐಸಿಸಿ ಕ್ರಮ ಕೈಗೊಳ್ಳುತ್ತದೆ. ಪಕ್ಷದ ಏಳಿಗೆ ಬಯಸುವವರು ಹೀಗೆ ಮಾತನಾಡಬಾರದು ದೊಡ್ಡ ನಾಯಕರು ಗೌರವ ಉಳಿಸಿಕೊಳ್ಳಬೇಕುಎಂದು ಹೇಳಿದರು. ಇದೇ ಸಂಧರ್ಭ ಎಸ್ ಎಂ ಕೃಷ್ಣ ಕಾಂಗ್ರೆಸ್ ಗೆ ರಾಜೀನಾಮೆ ವಿಚಾರದಲ್ಲಿ ಮಾತಾನಾಡಿ, ಕೃಷ್ಣ ಅವರು ತಪ್ಪಿನ ತೀರ್ಮಾನ ತೆಗೆದುಕೊಂಡಿದ್ದಾರೆ. ಪಕ್ಷಬಿಟ್ಟದ್ದು ಕಾರ್ಯಕರ್ತರಿಗೆ ನೋವಾಗಿದೆ .ಅವರು ದೊಡ್ಡ ಹುದ್ದೆಯ ಆಸೆ ಇಟ್ಟಿರಬಹುದು .ಕಾಂಗ್ರೆಸ್ ಪಕ್ಷದಿಂದ ಅವರು ಹೆಚ್ಚು ನಿರೀಕ್ಷೆ ಇಟ್ಟಿದ್ದಿರಬಹುದು. ಆದ್ರೆ ಪಕ್ಷ ಬಿಟ್ಟಿದ್ದು ಲಕ್ಷಾಂತರ ಮಂದಿ ಕಾರ್ಯಕರ್ತರಿಗೆ ನೋವಾಗಿದೆ. ಮುಂದೆ ಅವರಿಗೆ ಅವಕಾಶ- ಸ್ಥಾನಮಾನ ಸಿಗಲಿ. ರಾಜಕೀಯವಾಗಿ ಮುಂದೆ ಅವರಿಗೆ ಒಳ್ಳೆಯದಾಗಲಿ ಎಂದು ಹಾರೈಸಿದ್ರು.
Comments are closed.