ಕರಾವಳಿ

ಅನ್ಯಕೋಮಿನ ಫೇಸ್‌ಬುಕ್‌ ಗೆಳತಿಯೊಂದಿಗೆ ಮಾತನಾಡಿದ್ದಕ್ಕೆ ಯುವಕನಿಗೆ ಮಾರಣಾಂತಿಕ ಹಲ್ಲೆ

Pinterest LinkedIn Tumblr

ಉಡುಪಿ: ಫೇಸ್‌ಬುಕ್‌ ಮೂಲಕ ಪರಿಚಯವಾದ ಅನ್ಯಕೋಮಿನ ಗೆಳತಿಯೊಂದಿಗೆ ಹಬ್ಬದ ವಠಾರದಲ್ಲಿ ಮಾತನಾಡುತ್ತಿದ್ದ ಯುವಕನಿಗೆ ಗುಂಪೊಂದು ಮಾರಣಾಂತಿಕವಾಗಿ ಥಳಿಸಿದ ಘಟನೆ ಬುಧವಾರ ಸಂಜೆ ಉಡುಪಿಯ ಶಿರ್ವಾದಲ್ಲಿ ನಡೆದಿದೆ.

ಕಟಪಾಡಿ ನಿವಾಸಿ ಚೇತನ್(21) ಹಲ್ಲೆಗೊಳಗಾದ ಯುವಕ.

ಚೇತನ್ ಶ್ರೀಯಾನ್ ಬುಧವಾರ ಸಂಜೆ ಶಿರ್ವ ಸಾಂತ್ ಮಾರಿ ಹಬ್ಬಕ್ಕೆ ಬಂದಿದ್ದು, ಅಲ್ಲಿ ತನ್ನ ಪರಿಚಯದ ಯುವತಿಯೋರ್ವಳೊಂದಿಗೆ ಚರ್ಚಿನ ಮುಖ್ಯದ್ವಾರದ ಬಳಿ ನಿಂತು ಮಾತನಾಡುತ್ತಿರುವಾಗ ಶಿರ್ವ ಕಡೆಯಿಂದ ಕೆ. ಎ 02 ಎಂಬಿ 1200 ನೇ ನಂಬ್ರದ ಕಪ್ಪು ಬಣ್ಣದ ಇನ್ನೋವಾ ಕಾರಿನಲ್ಲಿ ಸುಮಾರು 7-8 ಜನರು ಚೇತನ್ ಶ್ರೀಯಾನ್‌ರನ್ನುಏಕಾಏಕಿ ಸಂತೆ ವಠಾರಕ್ಕೆ ಕರೆದುಕೊಂಡು ಹೋಗಿ ಕೈಗೆ, ತಲೆಗೆ ಮರದ ರೀಪಿನಿಂದ ಹಲ್ಲೆ ನಡೆಸಿದ್ದಾರೆ.

ಈ ಬಗ್ಗೆ ಚೇತನ್ ಶ್ರೀಯಾನ್‌ರವರು ನೀಡಿದ ದೂರಿನಂತೆ ಶಿರ್ವಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.