ಕರಾವಳಿ

ರಿಕ್ಷಾ ಚಾಲಕನ ಕೊಲೆ, ಮಸೀದಿಗೆ ಕಲ್ಲು; ಉಡುಪಿ ಪೊಲೀಸರಿಂದ ಹಿಂಜಾವೇ ಕಾರ್ಯಕರ್ತ ಅರೆಸ್ಟ್?

Pinterest LinkedIn Tumblr

ಉಡುಪಿ: ಉಡುಪಿಯ ಕರಾವಳಿ ಜಂಕ್ಷನ್ ಸಮೀಪದ ಖಾಸಗಿ ಹೋಟೇಲ್ ಸಮೀಪ ನಡೆದ ರಿಕ್ಷಾ ಚಾಲಕನ ಕೊಲೆ ಹಾಗೂ ಆದಿ ಉಡುಪಿಯಲ್ಲಿ ಅದೇ ದಿನ ರಾತ್ರಿ ನಡೆದ ಮಸೀದಿಗೆ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂದಪಟ್ಟಂತೆ ಹಿಂದೂಜಾಗರಣ ವೇದಿಕೆ ಕಾರ್ಯಕರ್ತನೆನ್ನಲಾದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.

ಸುಮಾರು 28 ವರ್ಷ ಆಸುಪಾಸಿನ ಮಂಗಳೂರು ಮೂಲದ ಯುವಕನನ್ನು ಪೊಲೀಸರು ವಶಕ್ಕೆ ಪಡೆದಿದ್ದು ವಿಚಾರಣೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

ಜನವರಿ 28ರ ಶನಿವಾರ ತಡರಾತ್ರಿ ಉಡುಪಿ ಕರಾವಳಿ ಜಂಕ್ಷನ್ ಸಮೀಪ ಆಟೋ ರಿಕ್ಷಾದಲ್ಲಿ ಒನ್ ವೇನಲ್ಲಿ ಬಂದ ಆಟೋ ಚಾಲಕ ಹನೀಫ್ ಹಾಗೂ ಯುವಕನ ನಡುವೆ ಮಾತಿನ ಚಕಮಕಿ ನಡೆದು ಯುವಕ ಹನೀಫ್ ಹಾಗೂ ಜಗಳ ಬಿಡಿಸಲು ಬಂದ ಮಹಮ್ಮದ್ ಶಬ್ಬೀರ್ ಎನ್ನುವವರಿಗೆ ಚೂರಿ ಹಾಕಿದ್ದ. ಈ ಚೂರಿ ಇರಿತದಿಂದ ಹನೀಫ್ ಗಂಭೀರವಾಗಿ ಗಾಯಗೊಂಡು ಸಾವನ್ನಪ್ಪಿದ್ದರು. ಅಂದು ರಾತ್ರಿಯೇ ಆದಿ ಉಡುಪಿ ಸಮೀಪದ ಮಸೀದಿಯ ಗಾಜುಗಳಿಗೆ ಕಲ್ಲು ತೂರಾಟ ನಡೆದಿತ್ತು. ಬೆಳಿಗ್ಗೆ ಸಿಸಿ ಟಿವಿ ಪೂಟೇಝ್ ಪರಿಶೀಲನೆ ನಡೆಸುವಾಗ ಯುವಕನೋರ್ವ ಕಲ್ಲು ತೂರಾಟ ನಡೆಸಿರುವುದು ದಾಖಲಾಗಿತ್ತು.

ಈ ದ್ರಶ್ಯಾವಳಿಗಳನ್ನು ಮುಖ್ಯವಾಗಿ ಬೆನ್ನತ್ತಿದ್ದ ಪೊಲೀಸರ ತಂಡಕ್ಕೆ ಮಹತ್ವದ ಸುಳಿವು ಲಭ್ಯವಾಗಿದ್ದು ಎರಡು ಪ್ರಕರಣದ ಆರೋಪಿ ಒಬ್ಬನೇ ಎಂಬುದು ಮೇಲ್ನೋಟಕ್ಕೆ ಸಾಭೀತಾಗಿದೆ ಎನ್ನಲಾಗಿದೆ. ಸದ್ಯ ವಿಚಾರಣೆ ನಡೆಯುತ್ತಿದ್ದು ಇನ್ನಷ್ಟು ಮಾಹಿತಿಗಳು ಬಳಿಕವಷ್ಟೇ ಹೊರಬೀಳಬೇಕಿದೆ.

Comments are closed.