ಅಂತರಾಷ್ಟ್ರೀಯ

2 ಕೋಟಿ ಮೌಲ್ಯದ ಮನೆಯನ್ನು ಕೇವಲ 168 ರೂ.ಗೆ ಮಾರಿದ ಯುವತಿ! ಏಕೆ ಎಂಬ ಗೊಂದಲ ಇದ್ದರೆ ಮುಂದೆ ಓದಿ….

Pinterest LinkedIn Tumblr

ಲಂಡನ್​ನಲ್ಲಿರುವ ಭಾರತೀಯ ಮೂಲದ ಶಿಕ್ಷಕಿ 1 ಕೋಟಿ 70 ಲಕ್ಷ ರೂ. ನೀಡಿ ಕೊಂಡುಕೊಂಡಿದ್ದ ಭವ್ಯವಾದ ಮನೆಯನ್ನು ಕೇವಲ 168 ರೂಪಾಯಿಗೆ ಮಾರಾಟ ಮಾಡಿದ್ದಾರೆ. ಅಚ್ಚರಿ ಅನ್ನಿಸಿದರೂ ಇದು ಸತ್ಯ!

2010ರಲ್ಲಿ ರೇಖಾ ಪಟೇಲ್ ಎಂಬಾಕೆ ಈ 18ನೇ ಶತಮಾನದ ಮನೆಯನ್ನು ಖರೀದಿ ಮಾಡಿದ್ದರು. ಮನೆ ಪುನರ್​ನಿರ್ವಣ ಸಂದರ್ಭದಲ್ಲಿ ಪಕ್ಕದ ಮನೆಯ ಹೆಂಚುಗಳಿಗೆ ಹಾನಿಯಾಗಿತ್ತು. ಇದಕ್ಕೆ ಸಂಬಂಧಿಸಿ ನೆರೆಮನೆಯಾಕೆ ಹೂಡಿದ್ದ ಪ್ರಕರಣ ಕೋರ್ಟ್​ನಲ್ಲಿ ಕಳೆದ ಆರು ವರ್ಷಗಳಿಂದ ನಡೆಯುತ್ತಿತ್ತು. ಇತ್ತೀಚೆಗೆ ಕೋರ್ಟ್, ಹಾನಿ ಸಂಭವಿಸಿದ ಪಕ್ಕದ ಮನೆಯವರಿಗೆ ಹಾನಿ ಮೊತ್ತ ಹಾಗೂ ಕಾನೂನು ವೆಚ್ಚ ಸೇರಿ 60 ಲಕ್ಷ ರೂ. ಭರಿಸುವಂತೆ ಆದೇಶಿಸಿತ್ತು.

ಆದರೆ ಅಷ್ಟೊಂದು ಮೊತ್ತ ಕೊಡಲು ತನ್ನ ಬಳಿಯಿಲ್ಲ ಎಂದ ರೇಖಾಳಿಗೆ, ಮನೆ ಮಾರಾಟ ಮಾಡಿ ಹಣ ನೀಡುವಂತೆ ಹೇಳಿತ್ತು. ಇದಕ್ಕೆ ಸುತಾರಾಂ ಒಪ್ಪದ ರೇಖಾ ಈ ಬಿಕ್ಕಟ್ಟಿನಿಂದ ತಪ್ಪಿಸಿಕೊಳ್ಳಲು ಎರಡು ಖಾಸಗಿ ಕಂಪನಿಗಳಿಗೆ ಒಪ್ಪಂದದ ಮೇರೆಗೆ 168 ರೂಪಾಯಿಗೆ ಮನೆ ಮಾರಾಟ ಮಾಡಿದ್ದಾಳೆ. ವಿಚಿತ್ರ ಅಂದ್ರೆ ಇದೇ ಕಂಪನಿಯವರ ಜತೆ 10 ವರ್ಷಗಳ ಕಾಲ ತಿಂಗಳಿಗೆ 4,000 ರೂ. ಬಾಡಿಗೆ ನೀಡುತ್ತ ಇದೇ ಮನೆಯಲ್ಲಿ ಇರಲು ಒಡಂಬಡಿಕೆ ಮಾಡಿಕೊಂಡಿದ್ದಾಳೆ.

Comments are closed.