ಕರಾವಳಿ

ಜನಾರ್ದನ ಪೂಜಾರಿ ದೇವರು ಕೊಟ್ಟ ಜವಾಬ್ದಾರಿ ಮಾಡುತ್ತಿದ್ದಾರೆ; ಆಸ್ಕರ್ ಫೆರ್ನಾಂಡಿಸ್

Pinterest LinkedIn Tumblr

ಉಡುಪಿ: ಎಸ್.ಎಂ ಕೃಷ್ಣ ರಾಜೀನಾಮೆ ವಿಚಾರದ ಬಗ್ಗೆ ಮಾಜಿ ಕೇಂದ್ರ ಸಚಿವ ಹಾಗೂ ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್ ಪ್ರತಿಕ್ರಿಯೆ ನೀಡಿದ್ದಾರೆ. ಎಸ್.ಎಂ ಕೃಷ್ಣ ಅವರು ರಾಜಿನಾಮೆ ನೀಡಿರುವ ಸಂಗತಿ ಮನೆಯೊಳಗಿನ ವಿಚಾರವಾಗಿದ್ದು ಈ ಬಗ್ಗೆ ಮನೆ ಮಂದಿಯೇ ಕುಳಿತು ಚರ್ಚೆ ಮಾಡಿ ನಿಭಾಯಿಸುತ್ತೇವೆ.

ರಾಜಕೀಯ ಅಂದಮೇಲೆ ಸಮಸ್ಯೆಗಳು ಉದ್ಭವ ಸಾಮಾನ್ಯವಾಗಿದ್ದು ಎಸ್.ಎಂ ಕೃಷ್ಣ ಅವರನ್ನು ಮನವೊಲಿಸುವಲ್ಲಿ ಪಕ್ಷ ಕಾರ್ಯಗತವಾಗಿದೆ, ಅತೀ ಶೀಘ್ರದಲ್ಲಿ ಸಮಸ್ಯೆಗೊಂದು ಪರಿಹಾರ ಹುಡುಕುತ್ತೇವೆ ಮತ್ತು ಪೂರ್ತಿ ಪ್ರಯಾಸಪಟ್ಟು ಸಮಸ್ಯೆ ಬಗೆಹರಿಸಿಕೊಳ್ಳುತ್ತೇವೆ ಎಂದ ಅವರು ಜಾಫರ್ ಷರೀಫ್ ಅಸಮಧಾನದ ಬಗ್ಗೆ ಮಾಹಿತಿಯಿಲ್ಲ ಎಂದು ಸ್ಪಷ್ಟನೆ ನೀಡಿದರು.

ಜನಾರ್ದನ ಪೂಜಾರಿ ಸಿಟ್ಟಿನ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಪೂಜಾರಿ ಅವರು ದೇವರು ಕೊಟ್ಟ ಜವಾಬ್ದಾರಿ ಮಾಡುತ್ತಿದ್ದಾರೆ. ಪೂಜಾರಿ ದಾರಿತೋರಿಸುವ ಕೆಲಸ ಮಾಡಿದ್ರೆ ತಿದ್ದಿಕೊಳ್ಳುತ್ತೇವೆ.

ಸಿಎಂ ಸಿದ್ದರಾಮಯ್ಯರಿಗೆ ಅವರದ್ದೇ ಆದ ಜವಾಬ್ದಾರಿ ಇದ್ದು ಏನಾದ್ರು ಹೆಚ್ಚುಕಡಿಮೆಯಾದ್ರೆ ಸಮಸ್ಯೆ ಬಗೆಹರಿಸುತ್ತೇವೆ ಎಂದರು.

Comments are closed.