ಮಂಗಳೂರು,ಜನವರಿ.30: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ 2016ನೇ ಸಾಲಿನ ಗೌರವ ಪ್ರಶಸ್ತಿ ಪುರಸ್ಕೃತರು ಮತ್ತು ಪುಸ್ತಕ ಬಹುಮಾನ ವಿಜೇತರನ್ನು ಆಯ್ಕೆ ಮಾಡಲಾಗಿದ್ದು, ಅಯ್ಕೆಯಾದವರ ಪಟ್ಟಿ ಬಿಡುಗಡೆಗೊಳಿಸಲಾಗಿದೆ.
ಗೌರವ ಪ್ರಶಸ್ತಿ:
ತುಳು ಸಾಹಿತ್ಯ ಕ್ಷೇತ್ರ, ತುಳು ನಾಟಕ ಕ್ಷೇತ್ರ ಹಾಗೂ ತುಳು ಸಿನಿಮಾ ಕ್ಷೇತ್ರಗಳಲ್ಲಿ ಅನನ್ಯ ಸೇವೆ ಸಲ್ಲಿಸಿದ ಮೂರು ಜನ ಗಣ್ಯರನ್ನು ಅಕಾಡೆಮಿಯ 2016ರ ಗೌರವ ಪ್ರಶಸ್ತಿಗಾಗಿ ಆಯ್ಕೆ ಮಾಡಲಾಗಿದೆ.
ಈ ಗೌರವ ಪ್ರಶಸ್ತಿಯು ರೂ.50,000-00 ನಗದು, ಶಾಲು, ಹಾರ, ಫಲತಾಂಬೂಲ, ಸ್ಮರಣೆಕೆ ಮತ್ತು ಪ್ರಶಸ್ತಿ ಪತ್ರಗಳನ್ನು ಒಳಗೊಂಡಿರುತ್ತದೆ.
1. ತುಳು ಸಾಹಿತ್ಯ ಕ್ಷೇತ್ರ : ಶ್ರೀ ಮುದ್ದು ಮೂಡುಬೆಳ್ಳೆ (64)
2. ತುಳು ನಾಟಕ ಕ್ಷೇತ್ರ : ಶ್ರೀ ಕೆ ಆನಂದ ಶೆಟ್ಟಿ (74)
3. ತುಳು ಸಿನಿಮಾ ಕ್ಷೇತ್ರ : ಶ್ರೀ ತಮ್ಮ ಲಕ್ಷ್ಮಣ (66)
ಪುಸ್ತಕ ಬಹುಮಾನ:
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ 2016ರ ಸಾಲಿನ ಪುಸ್ತಕ ಬಹುಮಾನಕ್ಕೆ ಈ ಕೆಳಗಿನ ಲೇಖಕರ ಕೃತಿಗಳು ಆಯ್ಕೆಯಾಗಿರುತ್ತವೆ.
ಈ ಪುಸ್ತಕ ಬಹುಮಾನವು ರೂ.25,000-00 ನಗದು, ಶಾಲು, ಹಾರ, ಫಲತಾಂಬೂಲ, ಸ್ಮರಣೆಕೆ ಮತ್ತು ಪ್ರಶಸ್ತಿ ಪತ್ರಗಳನ್ನು ಒಳಗೊಂಡಿರುತ್ತದೆ.
1. ತುಳು ಅಧ್ಯಯನ ವಿಭಾಗ : ಪಾಡ್ದನಗಳಲ್ಲಿ ಮೂಡಿ ಬಂದ ವೀರ ವನಿತೆಯರು ಡಾ. ಪಾಲ್ತಾಡಿ ರಾಮಕೃಷ್ಣ ಆಚಾರ್
2. ತುಳು ಕವನ ವಿಭಾಗ : ಒಯಿಲ್ ಯೋಗೀಶ ರಾವ್ ಚಿಗುರುಪಾದೆ
3. ತುಳು ನಾಟಕ ವಿಭಾಗ : ಬರ್ಬರಿಕ ಶಶಿರಾಜ್ ಕಾವೂರು.
ಪ್ರಶಸ್ತಿ ಪ್ರದಾನ ಮತ್ತು ಪುರಸ್ಕಾರ ಸಮಾರಂಭದ ದಿನಾಂಕವನ್ನು ಮುಂದೆ ಪ್ರಕಟಿಸಲಾಗುವುದು ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷೆ ಎಮ್ ಜಾನಕಿ ಬ್ರಹ್ಮಾವರ ಹಾಗೂ ರಿಜಿಸ್ಟ್ರಾರ್ ಚಂದ್ರಹಾಸ ರೈ. ಬಿ ತಿಳಿಸಿದ್ದಾರೆ.
Comments are closed.