ಕರಾವಳಿ

ಬಾಲ್ ಐಸ್ ಕ್ರೀಂ ಒಳಗೆ ಸುಡುಮದ್ದು ಇಟ್ಟ ಕಿಡಿಗೇಡಿಗಳು; ಬಾಂಬ್ ಸ್ಪೋಟವೆಂದು ಜನ ಕಂಗಾಲು

Pinterest LinkedIn Tumblr

ಕುಂದಾಪುರ: ಐಸ್ ಕ್ರೀಂ ಬಾಲ್ ಒಳಗೆ ಕಿಡಿಗೇಡಿಗಳು ಪಟಾಕಿ ಮದ್ದು ಇಟ್ಟು ಅದು ಸ್ಪೋಟಗೊಂಡ ಘಟನೆಯಿಂದ ಊರಿಗೆ ಊರೇ ಕಂಗಾಲಾದ ಘಟನೆ ಕುಂದಾಪುರ ತಾಲೂಕಿನ ಬಡಾಕೆರೆ ಎಂಬಲ್ಲಿ ನಡೆದಿದೆ.

ದುಂಡನೆಯ ಆಕ್ರತಿಯ ಐಸ್ ಕ್ರೀ ಬಾಲ್ ಒಳಗೆ ಸಣ್ಣ ಸಣ್ಣ ಪಟಾಕಿ ಮದ್ದುಗಳನ್ನು ತುಂಬಿಸಿ ಅದನ್ನು ಕಸಕಡ್ಡಿ ಎಸೆಯುವ ಜಾಗದಲ್ಲಿ ಯಾರೋ ಎಸೆದಿದ್ದರು. ಒಂದೆರಡು ದಿನಗಳಿಂದ ಬಡಾಕೆರೆ ಲಕ್ಷ್ಮೀಜನಾರ್ಧನ ದೇವಸ್ಥಾನದಲ್ಲಿ ಹಬ್ಬ ನಡೆದಿದ್ದು ಇಂದು ಕಸಕಡ್ಡಿಗಳು ಶೇಖರಿಸಿದ ಜಾಗಕ್ಕೆ ಯಾರೋ ಬೆಂಕಿ ಹಾಕಿದ್ದರು. ಬೆಂಕಿ ಹಿಡಿದ ಸ್ವಲ್ಪ ಹೊತ್ತಿಗೆ ಆ ಭಾಗದಲ್ಲಿ ಏನೋ ಸಿಡಿದ ಶಬ್ದ ಕೇಳಿಬಂದಿದ್ದು ಜನರು ಆಗಮಿಸಿ ನೋಡುವಾಗ ದುಂಡಾಕ್ರತಿಯ ವಸ್ತುಗಳು ಒಡೆದ ಸ್ಥಿತಿಯಲ್ಲಿತ್ತು. ಇದನ್ನು ಬಾಂಬ್ ಅಂದುಕೊಂಡ ಕೆಲವರು ಪೊಲೀಸರಿಗೆ ಮಾಹಿತಿ ನೀಡಿದ್ದು ಪೊಲೀಸರು ಬಂದು ಪರಿಶೀಲಿಸುವಾಗ ಯಾರೋ ಖಾಲಿಯಾದ ಐಸ್ ಕ್ರೀಂ ಬಾಲಿನೊಳಗೆ ಮದ್ದು ತುಂಬಿಸಿರುವುದು ಕಂಡು ಬಂದಿದೆ. ಘಟನೆಯಿಂದ ಯಾವುದೇ ಹಾನಿ ಸಂಭವಿಸಿಲ್ಲ.

ಬೈಂದೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

Comments are closed.