ಕರಾವಳಿ

ಜೀವ ಉಳಿಸಲು ನೆರವಾದ ಮೂವರಿಗೆ “ಜೀವ ರಕ್ಷಕ ಪ್ರಶಸ್ತಿ” ಪ್ರದಾನ

Pinterest LinkedIn Tumblr

ಮಂಗಳೂರು, ಜನವರಿ. 28: ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಡಿ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ವತಿಯಿಂದ ಮುಖ್ಯಮಂತ್ರಿ ಸಾಂತ್ವನ ಹರೀಶ್ ಯೋಜನೆಯಡಿ ಅಪಘಾತದಂತಹ ಸಂಕಷ್ಟದ ಸಂದರ್ಭದಲ್ಲಿ ತಕ್ಷಣದ ಚಿಕಿತ್ಸೆ ಒದಗಿಸಲು ಹಾಗೂ ಜೀವ ಉಳಿಸಲು ನೆರವಾಗುವ ದಯಾಳುಗಳಿಗೆ, ಸ್ಪಂದನೆ ನೀಡುವ ಪರೋಪಕಾರಿಗಳಿಗೆ “ಜೀವ ರಕ್ಷಕ ಪ್ರಶಸ್ತಿ”ಯನ್ನು ಜನವರಿ 26 ರಂದು ಜಿಲ್ಲಾ ಗಣರಾಜ್ಯೋತ್ಸವದ ಸಂದರ್ಭದಲ್ಲಿ ನೀಡಿ, ಗೌರವಿಸಲಾಯಿತು.

ಜಿಲ್ಲಾಮಟ್ಟದಲ್ಲಿ ಪ್ರಶಸ್ತಿ ಪುರಸ್ಕೃತರಾದವರು ಪ್ರಥಮ- ಹಸನಬ್ಬ ಚಾರ್ಮಾಡಿ, ದ್ವಿತೀಯ-ಸಿ.ಹೆಚ್. ಅಬ್ದುಲ್ ಗಪೂರ್, ಮೂಡಬಿದ್ರೆ, ತೃತೀಯ-ಮನೋಹರ, ಸುಳ್ಯ ಇವರಿಗೆ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಪ್ರಶಸ್ತಿ ಪ್ರದಾನ ಮಾಡಿ, ಪ್ರಮಾಣ ಪತ್ರ, ಫಲಕ ನೀಡಿದರು.

Comments are closed.