ಕರಾವಳಿ

ನಾಳೆ ಪ್ರತಿಷ್ಠಿತ “ಇನ್ಲ್ಯಾಂಡ್ ಸಿಯೋನ್” ವಸತಿ ಸಮುಚ್ಚಯ ಉದ್ಘಾಟನೆ

Pinterest LinkedIn Tumblr

ಮಂಗಳೂರು, ಜನವರಿ.28: ನಗರದ ಪ್ರತಿಷ್ಠಿತ ಬಿಲ್ಡರ್ಸ್ ಹಾಗೂ ಡೆವಲಪರ್ಸ್ ಸಂಸ್ಥೆ ‘ಇನ್ಲ್ಯಾಂಡ್ ಇನ್ಫ್ರಾಸ್ಟ್ರಕ್ಚರ್ ಡೆವಲಪರ್ಸ್ ಪ್ರೈವೇಟ್ ಲಿಮಿಟೆಡ್ ‘ ವತಿಯಿಂದ ನಗರದ ಫಳ್ನೀರ್ ಮುಖ್ಯ ರಸ್ತೆಯ ಪರಿಸರದಲ್ಲಿ ವಿನೂತನ ಶೈಲಿಯಲ್ಲಿ ನಿರ್ಮಿಸಲಾದ ” ಇನ್ಲ್ಯಾಂಡ್ ಸಿಯೋನ್ ” ವಸತಿ ಸಮುಚ್ಚಯದ ಉದ್ಘಾಟನಾ ಕಾರ್ಯಕ್ರಮವು ಜ.28ರಂದು ಸಂಜೆ 7ಕ್ಕೆ ನಡೆಯಲಿದೆ ಎಂದು ಇನ್ಲ್ಯಾಂಡ್ ಇನ್ಫ್ರಾಸ್ಟ್ರಕ್ಚರ್ ಆಡಳಿತ ಮಂಡಳಿಯ ನಿರ್ದೇಶಕ ಸಿರಾಜ್ ಅಹಮ್ಮದ್ ಅವರು ತಿಳಿಸಿದ್ದಾರೆ.

ಮುಖ್ಯ ಸಂಚಾರಿ ಮೇಲ್ವಿಚಾರಕ ಜೋ ಗೋನ್ಸಾಲ್ವಿಸ್ ವಸತಿ ಸಮುಚ್ಚಯ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಶಾಸಕರಾದ ಜೆ.ಆರ್.ಲೋಬೊ, ಕಾರ್ಪೊರೇಟರ್ ಅಬ್ದುಲ್ ರವೂಫ್, ಕ್ರೈಡ್ ಅಧ್ಯಕ್ಷ ಡಿ.ಬಿ.ಮೆಹ್ತಾ ಭಾಗವಹಿಸಲಿದ್ದಾರೆ ಎಂದವರು ಹೇಳಿದರು.

ಮಂಗಳೂರು ನಗರಕ್ಕೆ ಅತ್ಯಾಕರ್ಷಕ, ಆಧುನಿಕ ವಿನ್ಯಾಸದ ಸುಂದರ ಕಟ್ಟಡಗಳನ್ನು ಕಟ್ಟಿ ಮಂಗಳೂರು ಕೂಡ ಬೇರೆಬೇರೆ ಹೈಟೆಕ್ ಸಿಟಿಗಳಂತೆ ಸುಂದರವಾಗಿ ಕಾಣಲು ಇನ್ ಲ್ಯಾಂಡ್ ಸಂಸ್ಥೆ ಕೊಟ್ಟ ಕಾಣಿಕೆ ಅಪಾರ. ನಗರದ ಪ್ರಹತಿ ಹಾಗೂ ಮೆರುಗನ್ನು ಇಮ್ಮಡಿಗೊಳಿಸಿರುವ ಇನ್ಲ್ಯಾಂಡ್ ಸಂಸ್ಥೆಯ ಈ ಕೊಡುಗೆಯು ಮಂಗಳೂರು ಜನತೆಯು ಹೆಮ್ಮೆಪಡುವಂತಾಗಲು ಇನ್ಲ್ಯಾಂಡ್ ಸಂಸ್ಥೆಯ ಆಡಳಿತ ಮಂಡಳೀಯ ನಿರ್ದೇಶಕ ಸಿರಾಜ್ ಅಹಮ್ಮದ್ ರವರು ಕಾರಣಕರ್ತರು. ಅವರ ಮುಂದಾಲೋಚನೆ ಪ್ರಾಮಾಣಿಕ ಪ್ರಯತ್ನ ಮತ್ತು ಕಟ್ಟಡ ನಿರ್ಮಾಣದ ಗುಣಮಟ್ಟದಲ್ಲಿನ ಕಟ್ಟುನಿಟ್ಟಿನ ನಿಲುವು ಈ ಎಲ್ಲ ಯಶಸ್ಸಿಗೆ ಕಾರಣವಾಗಿದೆ.

ಈ ಸಂಸ್ಥೆಯು ನಿರ್ಮಾಣ ಕ್ಷೇತ್ರದಲ್ಲಿ ನುರಿತ ತಜ್ಞರ ತಂಡವನ್ನು ಹೊಂದಿದ್ದು, ಅತ್ಯುತ್ತಮವಾದ ಮಾದರಿ ಕಟ್ಟಡಗಳನ್ನು ನಿರ್ಮಿಸುತ್ತಿದೆ. ಗ್ರಾಹಕರ ನಿರೀಕ್ಷೆಯ ಸಾಕಾರ , ಸಂತೃಪ್ತಿ ಇನ್ ಲ್ಯಾಂಡ್ ಸಂಸ್ಥೆಯ ಉದ್ದೇಶ ಹಾಗೂ ಧ್ಯೇಯವಾಗಿದೆ ಎಂದು ನಿರ್ದೇಶಕರಾದ ಮೆರಾಜ್ ಯೂಸುಫ್, ವಹಾಜ್ ಯೂಸುಫ್ ತಿಳಿಸಿದ್ದಾರೆ.

ಉನ್ನತ ದ ಅತ್ಯಾಧುನಿಕ ಸೌಲಭ್ಯಗಳ ಉತ್ಕೃಷ್ಟ ಗುಣಮಟ್ಟದ ಐಶಾರಾಮಿ ಅಪಾರ್ಟ್ಮೆಂಟ್ಗಳನ್ನು ”ಇನ್ಲ್ಯಾಂಡ್ ಸಿಯೋನ್” ವಸತಿ ಸಮುಚ್ಚಯದಲ್ಲಿ ಸಾದರ ಪಡಿಸಿದೆ. ಈ ವಸತಿ ಸಮುಚ್ಚಯದಲ್ಲಿ 5 ಅಂತಸ್ತಿಮ 3ಬಿಎಚ್ಕೆಗಳ 25 ಫ್ಲಾಟ್ಗಳು ಅತ್ಯುತ್ತಮವಾಗಿ ರೂಪುಗೊಂಡಿದ್ದು, ವಿಶಾಲವಾದ ಲಾಬಿ, ಸಂದರ್ಶನಕರ ಲಾಂಜ್, ಜಿಮ್ನೇಶಿಯಂ, ವೀಡಿಯೊ ಡೋರ್ ಫೋನ್ ಸಿಸ್ಟಮ್, ಸಿಸಿಟಿವಿ ಪ್ರತಿ ಫ್ಲಾಟ್ಗಳಲ್ಲಿ ತ್ಯಾಜ ಸಂಸ್ಕರಣಾ ವಿಲೇವಾರಿ ವ್ಯವಸ್ಥೆ, ಮಕ್ಕಳ ಆಟದ ತಾಣ, ಡಬಲ್ ಎಲಿವೇಟರ್ ಹಾಗೂ ರೆಟಿಕ್ಯುಲೇಟೆಡ್ ಗ್ಯಾಸ್ ಸಂಪರ್ಕ ವ್ಯವಸ್ಥೆಯನ್ನು ಅಳವಡಿಸಲಾಗಿದೆ.

ಇನ್ಲ್ಯಾಂಡ್ನ್ ಪ್ರತಿಯೊಂದು ವಸತಿ ಮತ್ತು ವಾಣಿಜ್ಯ ಯೋಜನೆಗಳು ವ್ಯೂಹಾತ್ಮಕ ಹಾಗೂ ಆಕರ್ಷಕ ವಿನ್ಯಾಸಗಳ ವಸತಿ ಸಮುಚ್ಚಯಗಳ ಮೂಲಕ ಗ್ರಾಹಕ ಬಂಧುಗಳ ಪ್ರೀತಿ ವಿಶ್ವಾಸಕ್ಕೆ ಪಾತ್ರವಾಗಿದೆ.

Comments are closed.