ಕರಾವಳಿ

ಕರಾವಳಿಯ ಜಾನಪದ ಕ್ರೀಡೆ ಕಂಬಳ : ಸುಗ್ರೀವಾಜ್ಞೆ ಹೊರಡಿಸಲು ಕಲ್ಕೂರ ಆಗ್ರಹ

Pinterest LinkedIn Tumblr

ಮಂಗಳೂರು, ಜನವರಿ.27 :ಕಂಬಳ ಕರಾವಳಿ ಪ್ರದೇಶದ ಕೃಷಿ ವ್ಯವಸಾಯಕ್ಕೆ ಇಂಬು ನೀಡುವುದರೊಂದಿಗೆ ಜಾನಪದ ಮೌಲ್ಯವುಳ್ಳ ಒಂದು ವೈಶಿಷ್ಟ್ಯ ಪೂರ್ಣವಾದ ಸಾಂಪ್ರದಾಯಿಕ ಆಚರಣೆ. ಹಾಗಾಗಿ ರಾಜ್ಯ ಸರ್ಕಾರ ಕೂಡಲೇ ಸುಗ್ರಿವಾಜ್ಞೆ ಹೊರಡಿಸಬೇಕಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಪ್ರದೋಪ್ ಕುಮಾರ್ ಕಲ್ಕೂರ ಅವರು ತಿಳಿಸಿದ್ದಾರೆ.

ಬಹುಕಾಲದಿಂದ ನಡೆದು ಬಂದ ಜನಾದರಣೀಯವಾದ ಕಲೆ. ಕಂಬಳ ಹಿಂಸೆಯನ್ನು ಪ್ರಚೋದಿಸುವ ಕ್ರೀಡೆಯಲ್ಲ ಮನೆ ಮಕ್ಕಳ ಆರೈಕೆಯಿಂದಲೂ ಹೆಚ್ಚಿಗೆಆರೈಕೆ ನೀಡಿ ಪೌಷ್ಟಿಕಾಂಶಗಳನ್ನು ಕೊಟ್ಟು ಪ್ರತಿದಿನ ಸ್ನಾನ ಮಾಡಿಸಿ, ಮೈತಿಕ್ಕಿ, ಎಣ್ಣೆ ಹಚ್ಚಿ, ಗಾಳಿಯಂತ್ರವನ್ನು ಬಳಸಿ, ಪೋಷಿಸಿ ಕೋಣಗಳನ್ನು ಸಲುಹುವ ನಿಟ್ಟಿನಲ್ಲಿ ಹಿಂಸೆಯೆಂಬ ಶಬ್ದಕ್ಕೆ ಅರ್ಥವಿದೆಯೇ? ಕಂಬಳವನ್ನು ತಮಿಳುನಾಡಿನ ಜಲ್ಲಿಕಟ್ಟು ಕ್ರೀಡೆಗೆ ಹೋಲಿಸಲಾಗುವುದಿಲ್ಲ. ಅದಕ್ಕೂ ಸಮ್ಮತಿ ದೊರೆತಿರುವಾಗ ಸಂಪ್ರದಾಯ ಬದ್ಧವಾದ ಪಾರಂಪರಿಕ ಸೊಗಡಿನಿಂದ ಕೂಡಿದ ಧಾರ್ಮಿಕ ಆಚರಣೆಯೆಂದೇ ನಂಬಿರುವ ಜನಪ್ರಿಯ ಜಾನಪದೀಯ ಕ್ರೀಡೆಗೆ ನಿರ್ಬಂಧ ಹೇರುವುದು. ಸಮಂಜಸವಾಗಲಾರದು.

ಇದುಜಾತಿ, ಮತ, ಧರ್ಮ, ಬಡವ, ಬಲ್ಲಿದರೆಂಬ ಭೇದವಿಲ್ಲದೆ ಜಾತ್ಯತೀತ, ಪಕ್ಷಾತೀತವಾಗಿ ಸರ್ವರೂ ಸಂಭ್ರಮಿಸುವ ಹೆಮ್ಮೆಯ ಕಲೆ. ಯಕ್ಷಗಾನ ಹೇಗೆ ಕರಾವಳಿ ಪ್ರದೇಶದಲ್ಲಿ ಜನರ ಜೀವನದಲ್ಲಿ ಹಾಸುಹೊಕ್ಕಾಗಿ ಸೇರಿಕೊಂಡಿದೆಯೋ ಅದೇ ರೀತಿ ಕಂಬಳವೂ ಸರ್ವಾದರಣೀಯವೆನಿಸಿದೆ.

ಕಂಬಳವನ್ನು ದ.ಕ. ಜಿಲ್ಲಾಕನ್ನಡ ಸಾಹಿತ್ಯ ಪರಿಷತ್ತು ಒಕ್ಕೊರಲಿನಿಂದ ಬೆಂಬಲಿಸುವುದರೊಂದಿಗೆ ಕಂಬಳ ಸಮಿತಿಕೈಕೊಂಡ ನಿರ್ಣಯಗಳಿಗೆ ಪೂರ್ಣ ಸಮ್ಮತಿಯನ್ನು ನೀಡುತ್ತೇವೆ. ಕಂಬಳ ಸಮ್ಮಿತಿಯ ಜೊತೆ ಅಗತ್ಯವೆನಿಸಿದರೆ ಪ್ರತಿಭಟನೆಗೂ ಸಿದ್ಧ ಎಂಬುದಾಗಿ ಪರಿಷತ್ತಿನ ಅಧ್ಯಕ್ಷರಾದ ಪ್ರದೀಪಕುಮಾರ ಕಲ್ಕೂರರು ಹಾಗೂ ಸದಸ್ಯರು ಆಗ್ರಹಿಸಿದ್ದಾರೆ.

ಪ್ರದೀಪಕುಮಾರ ಕಲ್ಕೂರ, ಸಹಿತಪಿ. ಜನಾರ್ದನ ಹಂದೆ, ನಿತ್ಯಾನಂದ ಕಾರಂತ ಪೊಳಲಿ, ಜಿ.ಕೆ. ಭಟ್ ಸೇರಾಜೆ, ಪ್ರಭಾಕರರಾವ್ ಪೇಜಾವರ, ಪೂರ್ಣಿಮಾ ರಾವ್ ಪೇಜಾವರ, ಐತ್ತಪ್ಪ ನಾಯ್ಕ್, ಸುಧಾಕರ ರಾವ್ ಪೇಜಾವರ, ತಮ್ಮಯ್ಯ ಬಂಟ್ವಾಳ, ಅಬೂಬಕರ್ ಕೈರಂಗಳ, ರಫೀಕ್ ಅಮ್ಮದಿ ಮಾವಿನಕಟ್ಟೆ, ವಿಜಯಲಕ್ಷ್ಮಿ ಶೆಟ್ಟಿ ಮೊದಲಾದವರು ಕಂಬಳಕ್ಕೆ ತಮ್ಮ ಬೆಂಬಲವನ್ನು ಸೂಚಿಸಿರುವರು.

Comments are closed.