ಕರಾವಳಿ

ಎಸಿಪಿಗಳಾದ ಉದಯ ನಾಯಕ್ ಹಾಗೂ ವೆಲೈಂಟೈನ್ ಡಿಸೋಜರಿಗೆ ಪ್ರತಿಷ್ಠಿತ ರಾಷ್ಟ್ರಪತಿ ಪದಕ ಗೌರವ

Pinterest LinkedIn Tumblr

ಮಂಗಳೂರು, ಜನವರಿ. 25 : ಮಂಗಳೂರಿನ ಇಬ್ಬರು ಪೊಲೀಸ್ ಅಧಿಕಾರಿಗಳು ಈ ಬಾರಿಯ ರಾಷ್ಟ್ರಪತಿ ಪದಕದ ಗೌರವಕ್ಕೆ ಭಾಜನರಾಗಿದ್ದಾರೆ.

ಮಂಗಳೂರು ನಗರ ಸೆಂಟ್ರಲ್ ಉಪ ವಿಭಾಗದ ಎ.ಸಿ.ಪಿ. ಉದಯ ನಾಯಕ್ ಹಾಗು ಮಂಗಳೂರು ಸಹಾಯಕ ಕಮಿಷನರ್ (CCRB – ACP) ವೆಲೈಂಟೈನ್ ಡಿಸೋಜ ಅವರು ಈ ಬಾರಿಯ ರಾಷ್ಟ್ರಪತಿ ಪದಕಕ್ಕೆ ಅಯ್ಕೆಯಾದವರು.

ಅಪರಾಧಿಗಳನ್ನು ಹೆಡೆ ಮುರಿಕಟ್ಟಿ ಕಾನೂನು ಸುವ್ಯವಸ್ಥೆ ದಿಕ್ಕುತಪ್ಪದಂತೆ ನೋಡಿಕೊಳ್ಳುತ್ತ, ನಾಡಿನ ಪ್ರಜೆಗಳನ್ನು ಕಾಪಾಡುವ ಹೊಣೆಹೊತ್ತ ದಕ್ಷ ಮತ್ತು ಪ್ರಾಮಾಣಿಕ ಪೊಲೀಸ್ ಅಧಿಕಾರಿಗಳ ಸೇವೆಯನ್ನು ಗುರುತಿಸಲು ಪ್ರತಿವರ್ಷ ರಾಷ್ಟ್ರಪತಿ ಪದಕ ಗೌರವ ನೀಡಲಾಗುತ್ತದೆ. ಪ್ರತಿವರ್ಷ ಗಣರಾಜ್ಯೋತ್ಸವದಂದು ಅವರಿಗೆ ರಾಷ್ಟ್ರಪತಿ ಪದಕವನ್ನು ಪ್ರದಾನ ಮಾಡಲಾಗುತ್ತದೆ.

68ನೇ ಗಣರಾಜ್ಯೋತ್ಸವದ ಹಿನ್ನಲೆಯಲ್ಲಿ ಅನೇಕ ಪೊಲೀಸ್ ಪೇದೆಗಳು ಮತ್ತು ಅಧಿಕಾರಿಗಳು ಈ ಪುರಸ್ಕಾರಕ್ಕೆ ಭಾಜನರಾಗಿದ್ದು, ಮಂಗಳೂರಿನಿಂದ ಇಬ್ಬರು ಪದಕ ಪಡೆದಿದ್ದಾರೆ.

Comments are closed.