ಕರ್ನಾಟಕ

ಬಸಳೆಸೊಪ್ಪಿನ ಸೇವನೆ ಅರೋಗ್ಯ ದೃಷ್ಟಿಯಲ್ಲಿ ತುಂಬಾ ಒಳ್ಳೆಯದು ಯಾಕೆ.. ಗೊತ್ತೆ..?

Pinterest LinkedIn Tumblr

ಮಂಗಳೂರು: ಈ ಸೊಪ್ಪಿನಲ್ಲಿ ಅತಿ ಹೆಚ್ಚಿನ ಪೋಷಕಾಂಶಗಳು ಇರುತ್ತವೆ. “ಎ’, ‘ಬಿ’ ಜೀವಸತ್ವಗಳು ಕಬ್ಬಿಣ, ಪೊಟಾಸಿಯಂ ಅತ್ಯದಿಕ ಪ್ರಮಾಣದಲ್ಲಿದೆ.
ಆರೋಗ್ಯದ ದೃಷ್ಟಿಯಿಂದ ಈ ಸೊಪ್ಪನ್ನು ಅಡಿಗೆಯಲ್ಲಿ ವಾರಕ್ಕೆ ನಾಲ್ಕೈದು ದಿನಗಳಾದರೂ ಬಳಸುವುದು ಒಳ್ಳೆಯದು.

ಇದರ ಸೇವನೆಯಿಂದ ಅರೋಗ್ಯ ಸುಧಾರಣೆಯಾಗಿ ಶಾರೀರಿಕ ತೂಕ ಹೆಚ್ಚುವುದು. ಬೇಗ ಜೀರ್ಣ ಆಗುವುದಲ್ಲದೇ ಹಸಿವು ಹೆಚ್ಚಾಗುತ್ತದೆ. ತುಂಬಾ ಹಸಿವಾಗುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದೇ.

ಬಸಳೆಸೊಪ್ಪಿನಲ್ಲಿ ‘ಸಿ’ ಅನ್ನಾಂಗ, ಕಬ್ಬಿಣ ಹಾಗೂ ರಂಜಕದ ಅಂಶವು ಹೆಚ್ಚಾಗಿರುವುದರಿಂದ ಇದರ ಸೇವನೆಯು ಮಲವಿಸರ್ಜನೆಗೆ ಸುಲಭ ಸಾಧಕ.
ಮಕ್ಕಳು ಹಾಗೂ ಗರ್ಭಿಣಿಯರಿಗೆ ಅರೋಗ್ಯ ದೃಷ್ಟಿಯಿಂದ ತುಂಬಾ ಒಳ್ಳೆಯದು.

Comments are closed.