ಕರಾವಳಿ

ನಂದಿನಿ ಚಿತ್ರಕಲಾ ಸ್ಪರ್ಧೆ – 2017 : ವಿಜೇತ ವಿದ್ಯಾರ್ಥಿಗಳ ವಿವರ

Pinterest LinkedIn Tumblr

ಮಂಗಳೂರು,ಜನವರಿ.24: ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ವತಿಯಿಂದ ದಕ್ಷಿಣ ಕನ್ನಡ ಜಿಲ್ಲೆಯ ಸರಕಾರಿ, ಅನುದಾನಿತ ಮತ್ತು ಅನುದಾನರಹಿತ ಶಾಲೆಯ ವಿಧ್ಯಾರ್ಥಿಗಳಿಗೆ ನಗರದ ಮಿಲಾಗ್ರಿಸ್ ಚರ್ಚ್ ಸಭಾಂಗಣದಲ್ಲಿ ಆಯೋಜಿಸಲಾದ ನಂದಿನಿ ಕಿರಿಯ ಚಿತ್ರಕಲಾವಿದ ಸ್ಪರ್ಧೆಯ ವಿಜೇತರಿಗೆ ಸೋಮವಾರ ಬಹುಮಾನ ವಿತರಿಸಲಾಯಿತು.

ಬಹುಮಾನ ವಿತರಿಸಿ ಮಾತನಾಡಿದ ದ.ಕ.ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿ ಡಾ. ಎಂ.ಆರ್.ರವಿ ಅವರು, ವಿದ್ಯಾರ್ಥಿಗಳಲ್ಲಿ ಹೈನುಗಾರಿಕೆ ಬಗ್ಗೆ ಆಸಕ್ತಿ ಮೂಡಿಸುವ ನಿಟ್ಟಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಆಯೋಜಿಸಿರುವ ಚಿತ್ರಕಲಾ ಶ್ಪರ್ಧೆ ಶ್ಲಾಘನೀಯ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಅಂತಾರಾಷ್ಟ್ರೀಯ ಚಿತ್ರ ಕಲಾವಿದ ವಿಲಾಸ್ ನಾಯಕ್ ಅವರು ಸ್ಥಳದಲ್ಲೇ ಚಿತ್ರ ರಚಿಸುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.

ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ರವಿರಾಜ್ ಹೆಗ್ಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಡಾ. ವಿ. ಸತ್ಯನಾರಾಯಣ, ನಿರ್ದೇಶಕರಾದ ದಿವಕರ್ ಶೆಟ್ಟಿ, ಸುಚರೀತ ಶೆಟ್ಟಿ, ಜಾನಕಿ ಹಂದೆ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಒಕ್ಕೂಟದ ಮಾರುಕಟ್ಟೆ ವಿಭಾಗದ ವ್ಯವಸ್ಥಾಪಕ ಡಾ. ಕೆ.ಎಂ ಲೋಹಿತೇಶ್ವರ ಸ್ವಾಗತಿಸಿದರು. ಸಹಕಾರಿ ವ್ಯವಸ್ಥಾಪಕ ಜಯದೇವಪ್ಪ ಹಾಗೂ ಜಾನೆಟ್ ರೋಜಾರಿಯೋ ಕಾರ್ಯಕ್ರಮ ನಿರೂಪಿಸಿದರು. ಡೇರಿ ವ್ಯವಸ್ಥಾಪಕ ಎಂ ರಾಜಶೇಖರ್ ಮೂರ್ತಿ ವಂದಿಸಿದರು.

ನಂದಿನಿ ಚಿತ್ರಕಲಾ ಸ್ಪರ್ಧೆಯಲ್ಲಿ ಬಹುಮಾನಿತ ವಿದ್ಯಾರ್ಥಿಗಳ ಹೆಸರು ಮತ್ತು ವಿವರ

ಹಿರಿಯ (8ರಿಂದ 10ನೇ ತರಗತಿಯ ವಿದ್ಯಾರ್ಥಿಗಳು)

ಪ್ರಥಮ : ಗೌರವ ದೇವ – ಸೈಂಟ್ ಅಲೋಷಿಯಸ್ ಸೂಲ್ಕ್, ಮಂಗಳೂರು – ರೂ.10,000/-
ದ್ವಿತೀಯ: ಪೂಜಾ – ಸ್ನೇಹಾ ಹಿರಿಯ ಪ್ರಾಥಮಿಕ ಶಾಲೆ – ಸುಳ್ಯ, – ರೂ.6,000/-
ತೃತೀಯ: ಅತುಲ್ – ಕೆನರಾ ಹೈಸ್ಕೂಲ್ ಕೊಡಿಯಾಲಬೈಲ್, ಮಂಗಳೂರು – ರೂ.3,000/-

ಕಿರಿಯ (5 ರಿಂದ 7ನೇ ತರಗತಿಯ ವಿದ್ಯಾರ್ಥಿಗಳು)

ಪ್ರಥಮ : ಮೋಕ್ಷಿತ್ ಸುರೇಶ್ * ಡೆಲ್ಲಿ ಪಬ್ಲಿಕ್ ಸ್ಕೂಲ್, ಎಂ.ಆರ್.ಪಿ.ಎಲ್, ಮಂಗಳೂರು – ರೂ.10,000/-
ದ್ವಿತೀಯ: ಅನನ್ಯ ಹೆಚ್ – ಕೆನರಾ ಹಿರಿಯ ಪ್ರಾಥಮಿಕ ಶಾಲೆ – ಉರ್ವ, ಮಂಗಳೂರು – ರೂ.6,000/-
ತೃತೀಯ: ಪ್ರಣವ್ ಕಿಣಿ – ರೋಟರ್ ಅಂಗ್ಲ ಮಾಧ್ಯಮ ಶಾಲೆ, ಮೂಡಬಿದ್ರೆ, – ರೂ.3,000/-

ಹಾಗೂ ಪ್ರತಿಯೊಂದು ವಿಭಾಗದಲ್ಲಿ ೧೫ ರಂತೆ ಒಟ್ಟು ೩೦ ಮಂದಿ ವಿದ್ಯಾರ್ಥಿಗಳಿಗೆ ಸಮಾಧಾನಕಾರ ಬಹುಮಾನ ತಲಾ ರೂ.1,000/- ದಂತೆ ಒಟ್ಟು 30,000/- ರೂ.ಗಳನ್ನು ವಿತರಿಸಲಾಗಿದೆ.

Comments are closed.