ಕರಾವಳಿ

ಪೊಲೀಸರು ನಿಷ್ಠಾವಂತ ಕರ್ತವ್ಯದ ಮೂಲಕ ಸಮಾಜದ ರಕ್ಷಣೆಗೆ ಮುಂದಾಗಬೇಕು :ಪಿ.ಹರಿಶೇಖರನ್

Pinterest LinkedIn Tumblr

ಮಂಗಳೂರು, ಜನವರಿ.24: ಪೊಲೀಸರು ತಮ್ಮ ಕರ್ತವ್ಯದಲ್ಲಿ ಶ್ರದ್ಧೆ ವಹಿಸಬೇಕು. ಅನುಭವಗಳನ್ನು ಸಕಾಲಕ್ಕೆ ಬಳಸಿಕೊಂಡು ಸಮಾಜದ ರಕ್ಷಣೆಗೆ ಮುಂದಾಗಬೇಕು ಎಂದು ಪಶ್ಚಿಮ ವಲಯದ ಪೊಲೀಸ್ ಮಹಾನಿರೀಕ್ಷಕ ಪಿ.ಹರಿಶೇಖರನ್ ಹೇಳಿದರು.

ಅವರು ಸೋಮವಾರ ನಗರದ ಪೊಲೀಸ್ ಪೆರೇಡ್ ಮೈದಾನದಲ್ಲಿ ನಡೆದ.ಕ ಜಿಲ್ಲಾ ಪೊಲೀಸ್ ತರಬೇತಿ ಶಾಲೆಯ 13ನೆ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಕರ್ತವ್ಯ ಪಾಲನೆ ಸಂದರ್ಭ ಸಹನೆ ವಹಿಸುವ ಅಗತ್ಯವಿದೆ. ಶಿಸ್ತಿಗೆ ಆದ್ಯತೆ ನೀಡಿ ಕರ್ತವ್ಯ ಮೆರೆಯಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಅವರು ಹೇಳಿದರು.

ದ.ಕ.ಜಿಲ್ಲಾ ಎಸ್ಪಿ ಭೂಷಣ್ ಜಿ.ಬೋರಸೆ ವರದಿ ವಾಚಿಸಿದರು. ಅಪರ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ ವಂದಿಸಿದರು.

Comments are closed.