ಕರಾವಳಿ

ಮಂಗಳೂರು: ಐಶಾರಾಮಿ ವಸತಿ ಸಮುಚ್ಚಯ “ಇನ್ ಲ್ಯಾಂಡ್ ಎಪಿರಾನ್‌”ಗೆ ಜ.25ರಂದು ಶಿಲಾನ್ಯಾಸ

Pinterest LinkedIn Tumblr

ಮಂಗಳೂರು,ಜನವರಿ.23: ಇನ್ ಲ್ಯಾಂಡ್ ಸಂಸ್ಥೆಯ ಐಶಾರಾಮಿ ವಸತಿ ಸಮುಚ್ಚಯ “ಇನ್ ಲ್ಯಾಂಡ್ ಎಪಿರಾನ್ “ನ ಶಿಲಾನ್ಯಾಸ ಕಾರ್ಯಕ್ರಮ ದಿನಾಂಕ 25ರಂದು ಮುಂಜಾನೆ 9 ಗಂಟೆಗೆ ನಗರದ ಹೃದಯ ಭಾಗದ ಬಂಟ್ಸ್ ಹಾಸ್ಟೆಲ್ ರಸ್ತೆಯ ಪಕ್ಕದಲ್ಲಿನ ಪಿಂಟೋಸ್ ಲೇನ್ ನಲ್ಲಿ ಸರ್ವಧರ್ಮ ಸಂಪ್ರದಾಯದಂತೆ ಧಾರ್ಮಿಕ ಗುರುಗಳಿಂದ ಪೂಜೆ, ದುವಾ, ಪ್ರಾರ್ಥನೆಯೊಂದಿಗೆ ನೆರವೇರಲಿದೆ.

ಈ ವಸತಿ ಸಮುಚ್ಚಯವು 7 ಅಂತಸ್ತುಗಳನ್ನು ಹೊಂದಿದ್ದು 2BHK, 2BHK+ Study Room , ಹಾಗೂ 3BHK ಗಳ 29 ಫ್ಲಾಟ್ ಗಳನ್ನು ಹೊಂದಿವೆ. ಅನೇಕ ಆಧುನಿಕ ಸವಲತ್ತುಗಳನ್ನು ಹೊಂದಿರುವ ಇನ್ ಲ್ಯಾಂಡ್ ಎಪಿರಾನ್ ವಿನೂತನ ಹಾಗೂ ಉನ್ನತ ಶ್ರೇಣಿಯ ಗುಣಮಟ್ಟವನ್ನು ಹೊಂದಿದೆ. ನಿತ್ಯ ಜೀವನಕ್ಕೆ ಅಗತ್ಯವಿರುವ ಎಲ್ಲಾ ಸೌಲಭ್ಯಗಳು ಈ ಕಟ್ಟಡದ ಅನತಿ ದೂರದಲ್ಲಿದೆ.

ಇನ್ ಲ್ಯಾಂಡ್ ಸಂಸ್ಥೆಯು ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ 3 ದಶಕಗಳಿಂದ ತನ್ನ ಸೇವೆಯನ್ನು ಸಲ್ಲಿಸುತ್ತಿದ್ದು ಗ್ರಾಹಕ ಬಂಧುಗಳ ಮೆಚ್ಚುಗೆಗೆ ಪಾತ್ರವಾಗಿದೆ. ತಮ್ಮ ಸಂಸ್ಥೆಯೊಂದಿಗೆ ವಿಶ್ವಾಸನೀಯ ಭಾಂಧವ್ಯ ಬೆಳೆಸಿಕೊಂಡಿರುವ ಎಲ್ಲಾ ಗ್ರಾಹಕ ಬಂಧುಗಳಿಗೂ ಹೃತ್ಪೂರ್ವಕ ಕೃತಜ್ನತೆಗಳನ್ನು ಸಲ್ಲಿಸಿರುವ ಸಂಸ್ಥೆಯ ಆಡಳಿತ ನಿರ್ದೇಶಕರಾದ ಸಿರಾಜ್ ಅಹಮ್ಮದ್ ರವರು ಮುಂದೆಯು ತನ್ನ ಸಂಸ್ಥೆಯು ಪ್ರಗತಿಪರ ನಿಟ್ಟಿನಲ್ಲಿ ಸಾಗಲು ತಮ್ಮೆಲ್ಲರ ಸಹಕಾರವನ್ನು ಬಯಸಿರುತ್ತಾರೆ.

ಸಂಸ್ಥೆಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ www.inlandbuilders.net ನ್ನು ಸಂಪರ್ಕಿಸಬಹುದಾಗಿದೆ.

Comments are closed.