ಕರ್ನಾಟಕ

ಕೇಂದ್ರ ಕಂಬಳದ ಪರ ನಿಲ್ಲಲಿ: ಸಿದ್ದರಾಮಯ್ಯ

Pinterest LinkedIn Tumblr


ಬೆಂಗಳೂರು: ರಾಜ್ಯ ಸರ್ಕಾರ ಕಂಬಳ ಪರವಾಗಿ ಇದೆ. ಕೇಂದ್ರ ಸರ್ಕಾರ ತಮಿಳುನಾಡಿನ ಜಲ್ಲಿಕಟ್ಟು ಪರ ಒಲವು ತೋರಿದಂತೆ ರಾಜ್ಯದ ಕಂಬಳದ ಪರವಾಗಿ ನಿಲ್ಲಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ಹೇಳಿದರು.

ಕಂಬಳದ ಮೇಲಿನ ನಿಷೇಧ ತೆರವುಗೊಳಿಸಬೇಕು ಎಂದು ಒತ್ತಾಯಿಸಿ ಸಾಂಪ್ರದಾಯಿಕ ಕ್ರೀಡೆಯ ಆಚರಣೆಗೆ ಬೇಡಿಕೆ ವ್ಯಾಪಕವಾಗುತ್ತಿರುವ ಬೆನ್ನಲ್ಲೇ ಮುಖ್ಯಮಂತ್ರಿ ಕಂಬಳದ ಪರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.

ನಾವು ಕಂಬಳ ಪರವಾಗಿದ್ದೇವೆ. ಕಂಬಳದ ಪರವಾಗಿ ನಿಲುವು ತಾಳುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕುತ್ತೇವೆ. ಕೇಂದ್ರ ಸರ್ಕಾರ ತಮಿಳುನಾಡಿನ ಜಲ್ಲಿಕಟ್ಟುಗೆ ತೋರಿದ ಒಲವನ್ನೂ ಕಂಬಳದ ಪರ ತೋರಬೇಕು ಎಂದು ಸಿಎಂ ಒತ್ತಾಯಿಸಿದರು.

ಕಂಬಳ ಪರವಾಗಿ ದೊಟ್ಟಮಟ್ಟದಲ್ಲಿ ಪ್ರತಿಭಟನೆ ಸಂಘಟಿಸಲಾಗುತ್ತಿದೆಯಲ್ಲ ಎಂದು ಕೇಳಿದ ಪ್ರಶ್ನೆಗೆ, ಅವರು ಕಂಬಳ ಪರ ಪ್ರತಿಭಟನೆ ನಡೆಸುತ್ತಾರೆ, ನಾವೂ ಕಂಬಳ ಪರ ಇದ್ದೇವೆ ಎಂದು ಮುಖ್ಯಮಂತ್ರಿ ಹೇಳಿದರು.

Comments are closed.