
ಮಂಗಳೂರು: ಗೌಡ ಸಾರಸ್ವತ ಸಮಾಜದ ಪ್ರತಿಷ್ಠಿತ ದೇವಳವಾದ ಮಂಗಳೂರಿನ ರಥಬೀದಿಯಲ್ಲಿರುವ ಶ್ರೀವೆಂಕಟರಮಣ ದೇವಳದ ಶ್ರೀದೇವರ ಪುನಃ ಪ್ರತಿಷ್ಟಾ ವರ್ಧಂತಿ ಮಹೋತ್ಸವವು ಶ್ರೀಕಾಶೀ ಮಠಾಧೀಶರಾದ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿ ಯವರ ಶುಭಾಶಿರ್ವಾದದೊಂದಿಗೆ ಶುಕ್ರವಾರ ವಿಜೃಂಭಣೆಯಿಂದ ಜರುಗಿತು.

ಪ್ರಾತಃಕಾಲ ಶ್ರೀದೇವರ ಸನ್ನಿಧಾನದಲ್ಲಿ ದೇವಳದ ಮೊಕ್ತೇಸರರು,ತಂತ್ರಿಗಳು,ವೈದಿಕವೃಂದ ಹಾಗೂ ನೂರಾರು ಸಮಾಜ ಬಾಂಧವರೊಡಗೂಡಿ ಮಹಾ ಪ್ರಾರ್ಥನೆ ಬಳಿಕ ಶ್ರೀದೇವಳದ ತೀರ್ಥ ಮಂಟಪದಲ್ಲಿ ಶ್ರೀವೀರ ವೆಂಕಟೇಶ ಹಾಗೂ ಉತ್ಸವ ಮೂರ್ತಿ ಶ್ರೀನಿವಾಸ ದೇವರ ವಿಗ್ರಹಗಳಿಗೆ ಪಂಚಾಮೃತ,ಗಂಗಾಭಿಷೇಕ,ಕನಕಾಭಿಷೇಕ ಹಾಗೂ ಶತಕಲಶಾಭಿಷೇಕಗಳು ನೆರವೇರಿದವು.ಬಳಿಕ ಮಧ್ಯಹ್ನ ಮಹಾಪೂಜೆ ನಂತರ ಮಹಾಸಮಾರಾಧನೆ ನಡೆಯಿತು ರಾತ್ರಿ ಉತ್ಸವ ನೆರವೇರಿತು.
ಚಿತ್ರ: ಮಂಜುನೀರೇಶ್ವಾಲ್ಯ
Comments are closed.