ಅಂತರಾಷ್ಟ್ರೀಯ

ನಗ್ನವಾಗಿ ಮನೆ ಸ್ವಚ್ಛಗೊಳಿಸುವವರು ಬೇಕಾಗಿದ್ದಾರೆ …! ಸಾಮಾಜಿಕ ಜಾಲತಾಣಗಳಲ್ಲಿ ಜಾಹೀರಾತು …

Pinterest LinkedIn Tumblr

ಬರೀ ಓಟ, ಸೈಕಲ್‌ಯಾತ್ರೆ, ಪಾರ್ಟಿ ಇಂಥ ಕಾರ್ಯಕ್ರಮ ಗಳನ್ನು ಮಾಡಿಕೊಂಡು ತಮ್ಮ ಕಡೆಗೆ ವಿಶ್ವದ ಗಮನ ಸೆಳೆಯುತ್ತ, ತಮ್ಮ ಇರುವಿಕೆಯ ಸಾಬೀತುಪಡಿಸುತ್ತಿದ್ದ ಲಂಡನ್‌ನ ನಗ್ನಪಂಥಿ ಸಮುದಾಯ ಸದ್ಯ ಏನನ್ನು ಸಾಧಿಸಲು ಹೊರಟಿದೆಯೋ ಗೊತ್ತಿಲ್ಲ. ನಗ್ನವಾಗಿ ಮನೆ ಸ್ವಚ್ಛಗೊಳಿಸುವವರು ಬೇಕಾಗಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಜಾಹೀರಾತು ನೀಡಿದೆ. ನಗ್ನ ಕೆಲಸಗಾರರಿಗೆ ಒಂದು ಗಂಟೆಗೆ 6,000 ರೂ. ಬಂಪರ್‌ವೇತನ ನೀಡುವುದಾಗಿ ಕೂಡ ಹೇಳಿದೆ.

ಈ ಉದ್ಯೋಗಕ್ಕೆ ಬರುವ ಮಹಿಳೆಯರು ಮನೆ ಸ್ವಚ್ಛಗೊಳಿಸುವ, ಬಟ್ಟೆ ಒಗೆಯುವ ಇತರ ಗೃಹ ಕಾರ್ಯಗಳನ್ನು ಉಡುಪು ಧರಿಸದೇ ಕೇವಲ ಚಪ್ಪಲಿ ಮತ್ತು ಕೈಗವಸು ಧರಿಸಿ ಮಾಡಬೇಕಂತೆ. ತಮ್ಮ ಜಾಹೀರಾತು ಭಾರಿ ಪ್ರಸಿದ್ಧಿ ಪಡೆದಿದೆ ಮತ್ತು ಉತ್ತಮ ಪ್ರತಿಕ್ರಿಯೆ ದೊರಕುತ್ತಿವೆ ಎಂದು ಸಮುದಾಯ ಹೇಳಿದೆ.

ಇದೆಲ್ಲದರ ಜೊತೆ ಮತ್ತೂಂದು ಒಕ್ಕಣೆ ಸೇರಿಸಿದೆ. “ಈ ಕೆಲಸ ಕೇವಲ ಖುಷಿ ಮತ್ತು ಮೋಜಿಗಾಗಿ. ಇದು ಯಾವುದೇ ರೀತಿಯ ಲೈಂಗಿಕ ಆಸಕ್ತಿಯ ಹೊರತಾಗಿದೆ’.

Comments are closed.