ಕರಾವಳಿ

ಅಂತಾರಾಷ್ಟ್ರೀಯ ಯೋಗ ಸ್ಪರ್ಧೆ : ಪುರುಷೋತ್ತಮ್ ದೇರಾಜೆ ಹಾಗೂ ಅವರ ಶಿಷ್ಯರಿಗೆ ಪ್ರಶಸ್ತಿ

Pinterest LinkedIn Tumblr

ಬೆಂಗಳೂರು / ಮಂಗಳೂರು : ತಮಿಳುನಾಡಿನ ಪುದುಚೆರಿಯಲ್ಲಿ ಜನವರಿ 4ರಿಂದ 7ರ ವರೆಗೆ ಜರಗಿದ 23ನೇ ಅಂತಾರಾಷ್ಟ್ರೀಯ ಯೋಗ ಸ್ಪರ್ಧೆಯಲ್ಲಿ ಪುರುಷೋತ್ತಮ್ ದೇರಾಜೆ ಮತ್ತು ಅವರ ಶಿಷ್ಯರು ಪ್ರಶಸ್ತಿ ಗಳಿಸಿದ್ದಾರೆ.

ಯಶವಂತ್ ಪ್ರಥಮ, ಚಂದ್ರಪ್ರಕಾಶ್ ದ್ವಿತೀಯ ಸ್ಥಾನ ಹಾಗು ಪುರುಷೋತ್ತಮ್ ದೇರಾಜೆ ತ್ರಿತೀಯ ಸ್ಥಾನವನ್ನು ಗಳಿಸಿರುತ್ತಾರೆ. ಇದರಲ್ಲಿ 11 ವರ್ಷದ ಬಾಲಕ ಯಶವಂತ್ ಪ್ರಥಮ ಸ್ಥಾನದೊಂದಿಗೆ ಚಾಂಪಿಯನ್ ಆಫ್ ಚಾಂಪಿಯನ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಕರ್ನಾಟಕದ ಎಲ್ಲ ಬಾಲಕ ಹಾಗು ಪುರುಷರ ವಿಭಾಗಧಲ್ಲಿ ಇವರೊಬ್ಬರೆ ಪ್ರಥಮ ಸ್ಥಾನವನ್ನು ಗಳಿಸುವ ಮೂಲಕ ತಂಡಕ್ಕೆ ಕೀರ್ತಿ ತಂದಿದ್ದಾರೆ.

ಮೂಲತಹ ಮಂಗಳೂರಿನವರಾದ ಪುರುಷೋತ್ತಮ್ ದೇರಾಜೆ ಅವರು ಸುಮಾರ್ 8 ವರುಷಗಳಿಂದ ಬೆಂಗಳೂರಿನ ಇಲೆಕ್ಟ್ರಾನಿಕ್ ಸಿಟಿಯಲ್ಲಿ ಯೋಗ ತರಭೇತಿ ನೀಡುತ್ತಿದ್ದಾರೆ. ಸುಮಾರು 24 ವರುಷಗಳಿಂದ ಯೋಗಾಭ್ಯಾಸದಲ್ಲಿ ತೊಡಗಿರುವ ಅವರು ವಿಶ್ವದಾಖಲೆ ಕೂಡ ಮಾಡಿರುತ್ತಾರೆ.

ಅಂಜನೇಯ ರೆಡ್ಡಿ ಹಾಗೂ ಶ್ರೀಮತಿ ಚೈತ್ರ ದಂಪತಿಗಳ ಪುತ್ರ ಯಶವಂತ್ ಸುಮಾರ್ 5 ವರುಷಗಳಿಂದ ಪುರುಷೋತ್ತಮ್ ದೇರಾಜೆ ಅವರಲ್ಲಿ ತರಬೇತಿ ಪಡೆಯುತ್ತಿದ್ದಾರೆ. ರಂಗನಾಯಕಲ್ ಹಾಗೂ ಶ್ರೀಮತಿ ಜಯಂತಿ ದಂಪತಿಗಳ ಪುತ್ರ ಚಂದ್ರಪ್ರಕಾಶ್ ಸುಮಾರು 7  ವರುಷಗಳಿಂದ ತರಬೇತಿ ಪಡಯುತ್ತಿದ್ದಾರೆ. ಚಂದ್ರಪ್ರಕಾಶ್ ಹಾಗು ಯಶವಂತ್ ಹಲವಾರು ರಾಷ್ಟ್ರೀಯ ಹಾಗು ಅಂತರಾಷ್ಟ್ರೀಯ ಪ್ರಶಸ್ತಿ ಗಳಿಸಿದ್ದಾರೆ. ಪ್ರಸ್ತುತ ಇವರೆಲ್ಲರು ಬೆಂಗಳೂರಿನ ಇಲೆಕ್ಟ್ರಾನಿಕ್ ಸಿಟಿಯಲ್ಲಿ ವಾಸ್ತವ್ಯ ಹೊಂದಿದ್ದಾರೆ.

Comments are closed.