ಮಂಗಳೂರು, ಜನವರಿ.19: ಇಂಡಿಯನ್ ಕೆಥೊಲಿಕ್ ಯೂತ್ ಮೂವ್ಮೆಂಟ್ (ಐಸಿವೈಎಂ) ಸಂಘಟನೆಯು ಯೂತ್ ಕೌನ್ಸಿಲ್ ಆಫ್ ಕೆಥೊಲಿಕ್ ಬಿಷಪ್ಸ್ ಕಾನ್ಫರೆನ್ಸ್ ಆಫ್ ಇಂಡಿಯಾ(ಸಿಬಿಸಿಐ)ದ ಸಹಯೋಗದಲ್ಲಿ ಐದು ದಿನಗಳ ರಾಷ್ಟ್ರಮಟ್ಟದ 10ನೇ ಕೆಥೊಲಿಕ್ ಯುವ ಸಮಾವೇಶವನ್ನು ಹಮ್ಮಿಕೊಂಡಿದ್ದು, ಬುಧವಾರ ವಾಮಂಜೂರಿನ ಸಂತ ಜೋಸೆಫರ ಇಂಜಿನಿಯರಿಂಗ್ ಕಾಲೇಜಿನಲ್ಲಿ ಈ ಸಮಾವೇಶಕ್ಕೆ ಚಾಲನೆ ದೊರಕಿದೆ.
ಕರ್ನಾಟಕ ವಲಯ, ಮಂಗಳೂರು ಡಯಾಸಿಸ್, ಉಡುಪಿ, ಬೆಳ್ತಂಗಡಿ ಹಾಗೂ ಪುತ್ತೂರು ಡಯಾಸೀಸ್ ಸಂಯುಕ್ತವಾಗಿ ಮಂಗಳೂರಿನಲ್ಲಿ ಪ್ರಥಮವಾಗಿ ಆಯೋಜಿಸಿರುವ ಈ ಸಮಾವೇಶವನ್ನು ಬೆಂಗಳೂರಿನ ಆರ್ಚ್ ಬಿಷಪ್ ಅ. ವಂ.ಡಾ.ಬರ್ನಾರ್ಡ್ ಮೊರಾಸ್ ಉದ್ಘಾಟಿಸಿದರು. ಮಂಗಳೂರು ಬಿಷಪ್ ಡಾ.ಅಲೋಶಿಯಸ್ ಪಾವ್ಲ್ ಡಿಸೋಜ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಮಾವೇಶದಲ್ಲಿ ಬಳ್ಳಾರಿ ಬಿಷಪ್ ಅ.ವಂ.ಡಾ.ಹೆನ್ರಿ ಡಿಸೋಜ, ಬೆಳ್ತಂಗಡಿ ಬಿಷಪ್ ಅ.ವಂ. ಫಾ.ಲಾರೆನ್ಸ್ ಮುಕ್ಕುಝಿ, ಕಲಬುರಗಿ ಬಿಷಪ್ ಡಾ.ರಾಬರ್ಟ್ ಮಿರಾಂಡ, ಉಡುಪಿ ಬಿಷಪ್ ಡಾ.ಜೆರಾಲ್ಡ್ ಐಸಾಕ್ ಲೋಬೊ, ಫಾ.ಮೊರಾಸ್ ಡೆನಿಸ್ ಪ್ರಭು, ಸಿಬಿಸಿಐ ಯೂತ್ ಕೌನ್ಸಿಲ್ನ ಪದಾಧಿಕಾರಿಗಳಾದ ವಂ.ದೀಪಕ್ ಥಾಮಸ್, ವಂ.ಮರಿಯಂ ಜೋಸೆಫ್, ಸಿಜೋ ಅಂಬಟ್ಟ್ ವಿಫಿನ್ ಪೌಲ್, ಜೆನ್ನಿ ಜಾಯ್ ವಂ.ರೊನಾಲ್ಡ್ ಡಿಸೋಜ, ಜಾಕ್ಸನ್ ಡಿಕೋಸ್ತ ಮುಂತಾದವರು ಉಪಸ್ಥಿತರಿದ್ದರು.
Comments are closed.