ಕರಾವಳಿ

ರಾಷ್ಟ್ರೀಯ ಐಸ್ ಸ್ಕೇಟಿಂಗ್ : ಮಂಗಳೂರಿನ ಇಬ್ಬರು ಚಿನ್ನದ ಪದಕ ಗೆದ್ದು ರಾಷ್ಟ್ರೀಯ ತಂಡಕ್ಕೆ ಆಯ್ಕೆ

Pinterest LinkedIn Tumblr

ಮಂಗಳೂರು: ದೆಹಲಿಯಲ್ಲಿ ನಡೆದ 13 ನೇ ರಾಷ್ಟ್ರೀಯ ಐಸ್ ಸ್ಕೇಟಿಂಗ್ ಚಾಂಪಿಯನ್ ಶಿಪ್ ನಲ್ಲಿ ಮಂಗಳೂರಿನ ಇಬ್ಬರು ಮಕ್ಕಳು ಚಿನ್ನದ ಸಾಧನೆಗೈದಿದ್ದಾರೆ. 15 ವಯೋಮಿತಿಯ ಹುಡುಗರ ವಿಭಾಗದಲ್ಲಿ ನಿರಂಜನ್ ರಾಜೀವ್ ಮತ್ತು 13 ವಯೋಮಿತಿ ಹುಡುಗಿಯರ ವಿಭಾಗದಲ್ಲಿ ಆಶೆಲ್ ಡಿಸಿಲ್ವಾ ಚಿನ್ನದ ಪದಕ ಪಡೆದು ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿದ್ದಾರೆ.

ನಿರಂಜನ್ ರಾಜೀವ್ ಮಂಗಳೂರಿನ ಬಿಜೈ ಲೂರ್ಡ್ಸ್ ಸೆಂಟ್ರಲ್ ಸ್ಕೂಲ್ ನ 8 ನೇ ತರಗತಿ ವಿದ್ಯಾರ್ಥಿಯಾಗಿದ್ದು, ಆಶೆಲ್ ಡಿಸಿಲ್ವಾ ಮಂಗಳೂರಿನ ಕೇಂಬ್ರಿಡ್ಜ್ ಶಾಲೆಯ 7 ನೇ ತರಗತಿ ವಿದ್ಯಾರ್ಥಿನಿಯಾಗಿದ್ದಾರೆ.

ಇಬ್ಬರೂ ಪ್ರಸ್ತುತ ಶಾರ್ಟ್ ಟ್ರ್ಯಾಕ್ ಐಸ್ ಸ್ಕೇಟಿಂಗ್ ನ ರಾಷ್ಟ್ರೀಯ ತರಬೇತುದಾರ ಅವಧೂತ್ ತವಡೆಯಿಂದ ತರಬೇತಿ ಪಡೆಯುತ್ತಿದ್ದಾರೆ.

ಚಿನ್ನದ ಪದಕ ವಿಜೇತೆ ಆಶೆಲ್ ಡಿಸಿಲ್ವಾರವರ ಸಹೋದರ ಅಶ್ವಿನ್ ಡಿಸಿಲ್ವಾ ಈ ತಿಂಗಳಾಂತ್ಯದ ವೇಳೆಗೆ ಆಸ್ಟ್ರಿಯಾದಲ್ಲಿ ನಡೆಯಲಿರುವ ‘ವರ್ಲ್ಡ್ ಜ್ಯೂನಿಯರ್ ಶಾರ್ಟ್ ಟ್ರ್ಯಾಕ್ ಸ್ಪೀಡ್ ಸ್ಕೇಟಿಂಗ್ ಚಾಂಪಿಯನ್ ಶಿಪ್ ನಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.

Comments are closed.