ಕರಾವಳಿ

ದೇಯಿ ಬೈದ್ಯೆತಿ-ಕೋಟಿಚೆನ್ನಯ ಮೂಲಸ್ಥಾನ ಪುನರುತ್ಥಾನದ ಶಿಲಾನ್ಯಾಸ ಕಾರ್ಯಕ್ರಮದ‌ ಆಮಂತ್ರಣ ಪತ್ರಿಕೆ ಬಿಡುಗಡೆ

Pinterest LinkedIn Tumblr

ಮಂಗಳೂರು : ಶ್ರೀ ಕ್ಷೇತ್ರಗೆಜ್ಜೆಗಿರಿ ನಂದನ ಬಿತ್ತ್‌ಲ್‌ದೇಯಿ ಬೈದ್ಯೆತಿ-ಕೋಟಿಚೆನ್ನಯ ಮೂಲಸ್ಥಾನ ಆದಿ ದೈವಧೂಮಾವತಿಕ್ಷೇತ್ರ-ಗುರು ಸಾಯನ ಬೈದ್ಯರ ಶಕ್ತಿ ಪೀಠ ಬಡಗನ್ನೂರುಗ್ರಾಮ, ಪಡುಮಲೆ, ಪುತ್ತೂರು.ಇದರ ಮೂಲಸ್ಥಾನ ಪುನರುತ್ಥಾನದ ಶಿಲಾನ್ಯಾಸ ಕಾರ್ಯಕ್ರಮದ‌ ಆಮಂತ್ರಣ ಪತ್ರಿಕೆಯ ಬಿಡುಗಡೆ ಕಾರ್ಯಕ್ರಮವು ಮಂಗಳೂರಿನ ಶ್ರೀ ಬ್ರಹ್ಮಬೈದರ್ಕಳ ಗರೋಡಿ ಕ್ಷೇತ್ರ ಕಂಕನಾಡಿ ಯಲ್ಲಿ ನೆರವೇರಿತು.

ಆಮಂತ್ರಣ ಪತ್ರಿಕೆಯನ್ನು ಕೇರಳದ ಶ್ರೀ ಶ್ರೀಶ್ರೀ ಸತ್ಯಾನಂದ ಸ್ವಾಮೀಜಿ ಶಿವಗಿರಿ ಮಠ ವರ್ಕಳ ಇವರು ಬಿಡುಗಡೆಗೊಳಿಸಿ ಮಾತನಾಡಿ,‌ ಎಲ್ಲಾ ಭಕ್ತಾದಿಗಳನ್ನು ಒಗ್ಗೂಡಿಸಿ ಮಾತೆದೇಯಿಬೈದ್ಯೆತಿ-ಕೋಟಿಚೆನ್ನಯ ಮೂಲಸ್ಥಾನ ಗರೋಡಿ ನಿರ್ಮಾಣ, ಕ್ಷೇತ್ರಾಭಿವ್ರುದ್ಧಿ, ಪುನರುತ್ಥಾನ ಮಾಡ ಬೇಕೆಂದು ಕರೆ ನೀಡಿದರು. ಹಾಗೂ ವಿಶ್ವಮಟ್ಟದಲ್ಲಿ ಮೂಲಸ್ಥಾನ ಗೆಜ್ಜೆಗಿರಿ ಕ್ಷೇತ್ರವು ಪವಿತ್ರತಾಣವಾಗಿ ಬೆಳಗುತ್ತದೆ ಎಂದರು.

ಕಂಕನಾಡಿಗರೋಡಿ ಕ್ಷೇತ್ರಾಡಳಿತದ ಅಧ್ಯಕ್ಷರು ಮತ್ತುಗೆಜ್ಜೆಗಿರಿ ಕ್ಷೇತ್ರಾಡಳಿತ ಸಮಿತಿಯ‌ ಅಧ್ಯಕ್ಷರು ಶ್ರೀ ಚಿತ್ತರಂಜನ್ ಕೆ ಅಧ್ಯಕ್ಷತೆ ವಹಿಸಿದರು.ಗೆಜ್ಜೆಗಿರಿಕ್ಷೇತ್ರದ ಮೊಕ್ತೇಸರರು ಶ್ರೀಧರ್ ಪೂಜಾರಿ, ಕಾರ್ಯಧ್ಯಕ್ಷರುಗಳಾದ ಪಿತಾಂಬರ ಹೆರಾಜೆ ಮತ್ತುಜಯಂತ ನಡುಬೈಲ್, ಕೃಷ್ಣಪ್ಪ ಪೂಜಾರಿ ಪ್ರಾಂಶುಪಾಲರು, ಬೆಳ್ತಂಗಡಿ, ಬಿ.ಕೆ.ಪ್ರಸನ್ನಕುಮಾರ್, ಕೆ ಪ್ರಭಾಕರ್, ಶ್ರೀ ಶೈಲೇಂದ್ರ ವೈ ಸುವರ್ಣ, ದೀಪಕ್‌ ಕೋಟ್ಯಾನ್‌ ಗುರುಪುರ, ಸುಧಕರ್ ಸುವರ್ಣ, ಉಲ್ಲಾಸ್‌ಕೋಟ್ಯಾನ್, ಸಂತೋಷ್‌ ಕುಮಾರ್‌ ಎಸ್. ಕೆ ಬಿಲ್ಡರ್, ಬಲರಾಜ್‌ ಕಾಂಟ್ರಾಕ್ಟರ್, ಚಿತ್ತರಂಜ ನ್‌ಅಧ್ಯಕ್ಷರು ‌ಆತ್ಮಶಕ್ತಿ ಸಂಸ್ಥೆ, ಮೋಹನದಾಸ್ ಬಂಗೇರ, ಹರೀಶ್‌ ಅಡ್ಯಾರ್, ದಿನಾಕರ್ ಪೂಜಾರಿ, ಶೀನಪ್ಪ ಪೂಜಾರಿ, ಪ್ರಶಾಂತ್ ಕೆ. ಪೂಜಾರಿ ಮಸ್ಕತ್‌ ಓಮಾನ್, ಅರುಣ್ ಸುವರ್ಣ, ಪ್ರವೀಣ್‌ ಅಂಚನ್, ತುಪ್ಪೆಕಲ್ಲು, ರಾಜೇಂದ್ರ ಚಿಲಿಂಬಿ, ನವೀನ್ ಸುವರ್ಣ ಉಪಸ್ಥಿತರಿದ್ದರು.

ಜಯಾನಂದ್ ಮಂಗಳೂರು ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ರವಿ ಪೂಜಾರಿ ಚಿಲಿಂಬಿ ವಂದಿಸಿದರು.

Comments are closed.