ಕರ್ನಾಟಕ

ಪ್ರಪಂಚದ 10 ಡೈನಮಿಕ್ ನಗರಗಳ ಪಟ್ಟಿಯಲ್ಲಿ ಬೆಂಗಳೂರಿಗೆ ಅಗ್ರ ಸ್ಥಾನ

Pinterest LinkedIn Tumblr

ಬೆಂಗಳೂರು: ಸಿಲಿಕಾನ್ ಸಿಟಿ ಎಂಬ ಖ್ಯಾತಿ ಪಡೆದಿರುವ ಬೆಂಗಳೂರಿಗೆ ಈಗ ಮತ್ತೊಂದು ಗರಿ. ಪ್ರಪಂಚದ 10 ಡೈನಮಿಕ್ ನಗರಗಳ ಪಟ್ಟಿಯಲ್ಲಿ ಬೆಂಗಳೂರು ಅಗ್ರ ಸ್ಥಾನ ಪಡೆದಿದೆ.

ಒಂದು ನಗರ ತಂತ್ರಜ್ಞಾನ ಮತ್ತು ಆವಿಷ್ಕಾರವನ್ನು ಬಳಸಿಕೊಂಡು ಎಷ್ಟು ಬೇಗ ಬದಲಾವಣೆಸ ಹೊಂದುತ್ತಿದೆ ಎಂಬುದನ್ನು ಆಧರಿಸಿ ಜೋನ್ಸ್ ಲ್ಯಾಂಗ್ ಲಾಸೆಲ್ಲೆ ಸಂಸ್ಥೆ ಸಮೀಕ್ಷೆ ನಡೆಸಿದೆ. ಇದರಲ್ಲಿ ಬೆಂಗಳೂರು ಅಗ್ರ ಸ್ಥಾನ ಪಡೆದುಕೊಂಡಿದೆ.

ವಿಯಟ್ನಾಮ್‍ನ ಹೋ ಚಿ ಮಿನ್ ಸಿಟಿ ಹಾಗೂ ಅಮೆರಿಕದ ಸಿಲಿಕಾನ್ ವ್ಯಾಲಿ 2 ಹಾಗೂ 3 ನೇ ಸ್ಥಾನ ಪಡೆದುಕೊಂಡಿದೆ. ಹೈದ್ರಬಾದ್ 5ನೇ ಸ್ಥಾನ ಗಿಟ್ಟಿಸಿಕೊಂಡಿದ್ದು, ಲಂಡನ್ 6ನೇ ಸ್ಥಾನದಲ್ಲಿದೆ. ಸಮೀಕ್ಷೆಯ ಪೂರ್ಣ ವರದಿಯನ್ನ ಫೆಬ್ರವರಿಯಲ್ಲಿ ಸಂಸ್ಥೆ ಬಿಡುಗಡೆ ಮಾಡಲಿದೆ.

Comments are closed.