ಕರಾವಳಿ

ಸಮಗ್ರ ಮಾಹಿತಿ ಹಾಗೂ ಸೂಕ್ತ ನಿರ್ವಹಣೆಗೆ ಯೋಜನೆ ಸಹಕಾರಿ : ಅಂತರ್ಜಾಲ ವಿಭಾಗದ ಪ್ರಥಮ ಕೇಂದ್ರ ಉದ್ಘಾಟಿಸಿ ಸಚಿವ ಆಂಜನೇಯ

Pinterest LinkedIn Tumblr

ಮಂಗಳೂರು,ಜನವರಿ.17: ರಾಜ್ಯದಲ್ಲಿ ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ನಿಲಯಗಳ ಸಮಗ್ರ ಮಾಹಿತಿ ಹಾಗೂ ಸೂಕ್ತ ನಿರ್ವಹಣೆಗೆ ಈ ನೂತನ ಯೋಜನೆ ಸಹಕಾರಿಯಾಗಲಿದೆ. ಮುಂದಿನ ಹಂತದಲ್ಲಿ ರಾಜ್ಯದ ಇತರ ಕಡೆಗಳಲ್ಲೂ ಈ ಯೋಜನೆಯನ್ನು ವಿಸ್ತರಿಸಲಾಗುವುದು ಎಂದು ರಾಜ್ಯ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಇಲಾಖೆಯ ಸಚಿವ ಎಚ್.ಆಂಜನೇಯ ತಿಳಿಸಿದರು.

ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ರಾಜ್ಯದಲ್ಲಿ ಹಮ್ಮಿಕೊಳ್ಳಲು ಉದ್ದೇಶಿಸಿರುವ ಅಂತರ್ಜಾಲ ವಿಭಾಗದ ಪ್ರಥಮ ಕೇಂದ್ರವನ್ನು ದ.ಕ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಅವರು ಉದ್ಘಾಟಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ, ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್, ಶಾಸಕ ಜೆ.ಆರ್.ಲೋಬೊ, ಐವನ್ ಡಿ ಸೋಜ,ಮೇಯರ್ ಹರಿನಾಥ್, ಮನಪಾ ಮುಖ್ಯ ಸಚೇತಕ ಶಶಿಧರ್ಮ, ಮನಪಾ ಸದಸ್ಯ ರಾಧಾಕೃಷ್ಣ ಹೆಗ್ಡೆ ,ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಎಂ.ಆರ್.ರವಿ, ಮನಪಾ ಆಯುಕ್ತ ಮುಹಮ್ಮದ್ ನಝೀರ್, ಸಮಾಜ ಕಲ್ಯಾಣಾ ಇಲಾಖಾ ಉಪನಿರ್ದೇಶಕ ಡಾ.ಜಿ.ಸಂತೋಷ್ ಮೊದಲಾದವರು ಈ ವೇಳೆ ಉಪಸ್ಥಿತರಿದ್ದರು.

Comments are closed.