ಕರಾವಳಿ

ಬೈಂದೂರು ಪೊಲೀಸ್ ಸೋಗಿನಲ್ಲಿ ಬಂದು ವ್ಯಕ್ತಿಯ ಚಿನ್ನದ ಸರ ಸುಲಿಗೆಗೆ ಯತ್ನ

Pinterest LinkedIn Tumblr

ಕುಂದಾಪುರ: ಬೈಕಿನಲ್ಲಿ ಬಂದ ವ್ಯಕ್ತಿಯೋರ್ವ ತಾನು ಬೈಂದೂರು ಪೊಲೀಸ್ ಎಂದು ಹೇಳಿ ಚಿನ್ನದ ಸರ ಸುಲಿಗೆಗೆ ಯತ್ನ ನಡೆಸಿದ ಘಟನೆ ಕುಂದಾಪುರ ತಾಲೂಕಿನ ಬೈಂದೂರು ಸಮೀಪದ ಕಾಲ್ತೋಡು ಎಂಬಲ್ಲಿ ನಡೆದಿದೆ.

ಬೈಂದೂರು ಕಂಬದಕೋಣೆ ನಿವಾಸಿ ಗಣೇಶ್‌ ದೇವಾಡಿಗ ಸಂಕ್ರಮಣದ ದಿನ ಸಂಜೆ ಶೇಡಿಗುಡ್ಡೆಯ ಅವರ ಸ್ನೇಹಿತನ ಮನೆಗೆ ಹೋಗಲು ಕಾಲ್ತೋಡು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಓರ್ವ ಅಪರಿಚಿತ ವ್ಯಕ್ತಿಯು ಗಣೇಶ್‌ ದೇವಾಡಿಗರವರ ಹಿಂದಿನಿಂದ ಮೋಟಾರ್‌ ಸೈಕಲ್‌ನಲ್ಲಿ ಬಂದು ಗಣೇಶ್‌ ದೇವಾಡಿಗರಲ್ಲಿ ತಾನು ಬೈಂದೂರು ಠಾಣೆಯ ಪೊಲೀಸು ಎಂದು ಹೇಳಿದ್ದು, ಆಗ ಗಣೇಶ್‌ ದೇವಾಡಿಗರವರು ‘ನಿನ್ನನ್ನು ಬೈಂದೂರು ಠಾಣೆಯಲ್ಲಿ ನೋಡಿರುವುದಿಲ್ಲ’ ಎಂದು ಪ್ರತಿಕ್ರಿಸಿದ್ದಾರೆ. ಆಗ ಅಪರಿಚಿತ ವ್ಯಕ್ತಿಯು ಗಣೇಶ್‌ ದೇವಾಡಿಗರಿಗೆ ಕೈಯಿಂದ ಹೊಡೆದು ಗಣೇಶ್‌ ದೇವಾಡಿಗರ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಕಸಿಯಲು ಪ್ರಯತ್ನಿಸಿದ್ದು, ಈ ವೇಳೆ ಗಣೇಶ್ ಬೊಬ್ಬೆ ಹೊಡೆದಾಗ ಅವರ ಸ್ನೇಹಿತರಾದ ಧನಂಜಯ ಮತ್ತಿತರರು ಓಡಿಬಂದಿದ್ದಾರೆ. ಇದನ್ನು ನೋಡಿದ ಅಪರಿಚಿತ ವ್ಯಕ್ತಿಯು ಕಾಲ್ತೋಡು ರಸ್ತೆಯಲ್ಲಿ ಮೋಟಾರ್‌ ಸೈಕಲ್‌ನಲ್ಲಿ ಪರಾರಿಯಾಗಿದ್ದಾನೆ.

ಅಪರಿಚಿತ ವ್ಯಕ್ತಿಯ ಮೋಟಾರ್‌ ಸೈಕಲ್‌ ನಂಬ್ರ ಕೆಎ 19 ವಿ 8275 ಆಗಿದ್ದು, ಆತನ ಚಹರೆ-ಕಪ್ಪು ಮೈಬಣ್ಣ, ದೃಢಕಾಯ ಶರೀರ, ಪ್ರಾಯ:25 ರಿಂದ 30 ವರ್ಷ, ತಿಳಿ ಹಳದಿ ಬಣ್ಣದ ಶರ್ಟ್‌ ಹಾಗೂ ಕಂದು ಬಣ್ಣದ ಪ್ಯಾಂಟ್‌ ಧರಿಸಿರುತ್ತಾನೆ.

ಈ ಬಗ್ಗೆ ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

————————————-

-ಯೋಗೀಶ್ ಕುಂಭಾಸಿ

Comments are closed.