ಕರಾವಳಿ

ಗಿಳಿ ಶಾಸ್ತ್ರದವನ ಬಳಿಯಿದ್ದ ನೀಲಿ ತಲೆ ಗಿಳಿ ಪಿಲಿಕುಳ ಸೇರಿತು..!

Pinterest LinkedIn Tumblr

ಕುಂದಾಪುರ: ತನ್ನ ಸ್ವಂತ ಲಾಭಕ್ಕಾಗಿ ಗಿಳಿಯನ್ನು ಹಿಡಿದುಕೊಂಡು ಶಾಸ್ತ್ರ ಹೇಳುವ ನೆಪದಲ್ಲಿ ಜನರನ್ನು ಯಾಮಾರಿಸುವ ಮಂದಿ ಅಲ್ಲಲ್ಲಿ ಕಾಣಸಿಗುತ್ತಾರೆ. ಅಂತೆಯೇ ಕುಂದಾಪುರದಲ್ಲಿಯೂ ಹೀಗೆಯೇ ಒಬ್ಬ ಗಿಳಿ ಶಾಸ್ತ್ರ ಹೇಳುವವನ ಬಳಿಯಿದ್ದ ನೀಲಿ ಬಣ್ಣದ ತಲೆಯ ಆಕರ್ಷಕ ಗಿಳಿಯನ್ನು ಅರಣ್ಯಾಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಪಶ್ಚಿಮ ಘಟ್ಟ ಹಾಗೂ ಮಲೆನಾಡು ಪ್ರದೇಶದಲ್ಲಿ ಈ ಮೊದಲು ಹೆಚ್ಚಾಗಿ ಕಂಡುಬರುತ್ತಿದ್ದು ಈಗ ವಿನಾಶದ ಅಂಚಿನಲ್ಲಿರುವ ನೀಲಿ ತಲೆ ಗಿಳಿ ಕಾಣಸಿಗುವುದು ಬಲು ಅಪರೂಪ. ಆದರೇ ಕುಂದಾಪುರದಲ್ಲಿ ಇತ್ತೀಚೆಗೆ ಹಲವು ಸಮಯಗಳಿಂದ ಗಿಳಿಶಾಸ್ತ್ರ ಹೇಳುವವನೊಬ್ಬನ ಬಳಿ ಈ ವಿಶೇಶ ಗಿಳಿಯಿರುವುದು ಕುಂದಾಪುರ ಅರಣ್ಯ ಇಲಖೆಯವರ ಗಮನಕ್ಕೆ ಬಂದಿದ್ದು ಕುಂದಾಪುರ ವಲಯ ಅರಣ್ಯಾಧಿಕಾರಿ ಶರತ್ ಶೆಟ್ಟಿ, ಉಪವಲಯ ಅರಣ್ಯಧಿಕಾರಿಗಳಾದ ದಿಲೀಪ್ ಹಾಗೂ ಗುರುರಾಜ್ ಕಾವ್ರಾಡಿ ಅವರು ವಶಕ್ಕೆ ಪಡೆದು ಮಂಗಳೂರು ಪಿಲಿಕುಳದ ವನ್ಯಜೀವಿ ಧಾಮಕ್ಕೆ ಬಿಟ್ಟಿದ್ದಾರೆ.

————————————-

-ಯೋಗೀಶ್ ಕುಂಭಾಸಿ

Comments are closed.