ಕರಾವಳಿ

ಮಣಿಪಾಲ: ಪೊಲೀಸರ ಮನೆಯಲ್ಲಿ ಕಳ್ಳರ ಕರಾಮತ್ತು; ಲಕ್ಷಾಂತರ ಚಿನ್ನಾಭರಣಕ್ಕೆ ಕನ್ನ

Pinterest LinkedIn Tumblr

ಉಡುಪಿ: ಮಣಿಪಾಲ ಪೊಲೀಸ್ ವಸತಿ ಗೃಹಕ್ಕೆ ನುಗ್ಗಿದ ಕಳ್ಳರು 5 ಲಕ್ಷಕ್ಕೂ ಅಧಿಕ ಮೌಲ್ಯದ ನಗ-ನಗದು ದೋಚಿ ಪರಾರಿಯಾದ ಘಟನೆ ನಡೆದಿದೆ.

ಮಣಿಪಾಲದಲ್ಲಿರುವ ಪೊಲೀಸ್ ವಸತಿ ಗೃಹ ಬ್ಲಾಕ್ ಸಂಖ್ಯೆ6 ರ ಮನೆ ಸಂಖ್ಯೆ 66 ಮತ್ತು 67 ರಲ್ಲಿ ಈ ಕಳ್ಳತನ ನಡೆದಿದೆ. ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್ ಮೀಸಲು ಪಡೆಯಲ್ಲಿ ಸೇವಲ್ಲಿರುವ ಇಬ್ಬರ ಮನೆಯಲ್ಲಿ ಈ ಕಳ್ಳತನ ನಡೆದಿದೆ. ವಸತಿ ಗೃಹ ನಂಬ್ರ 66 ಮತ್ತು 67ನೇದರ ಬಾಗಿಲಿನ ಬೀಗದ ಕೊಂಡಿಯನ್ನು ತುಂಡರಿಸಿ ಮನೆಯೊಳಗೆ ಪ್ರವೇಶಿಸಿ ವಸತಿ ಗೃಹ ನಂಬ್ರ 66ನೇದರಲ್ಲಿ ಒಟ್ಟು 176 ಗ್ರಾಂ ಚಿನ್ನಾಭರಣ ಹಾಗೂ ವಸತಿ ಗೃಹ ನಂಬ್ರ 67ನೇದರಲ್ಲಿ 5000/- ರೂಪಾಯಿ ನಗದು ಹಾಗೂ ಬೆಳ್ಳಿಯ ಉಡಿದಾರವನ್ನು ಕಳವು ಮಾಡಿಕೊಂಡು ಹೋಗಿರುವುದಾಗಿದೆ. ಕಳವಾದ ಚಿನ್ನಾಭರಣ ಹಾಗೂ ನಗದಿನ ಒಟ್ಟು ಮೌಲ್ಯ 5,10,000/- ರೂಪಾಯಿ ಆಗಿರುತ್ತದೆ.

ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ.

Comments are closed.