ಕರಾವಳಿ

ಉಳ್ಳಾಲ: ಆರು ಮಂದಿ ದುಷ್ಕರ್ಮಿಗಳ ತಂಡದಿಂದ ಯುವಕನ ಕೊಲೆಗೆ ಯತ್ನ

Pinterest LinkedIn Tumblr

ಮಂಗಳೂರು: ಉಳ್ಳಾಲ ಸಮೀಪದ ಉಚ್ಚಿಲ ಸಮುದ್ರ ಕಿನಾರೆಯಲ್ಲಿ ವಾಲಿಬಾಲ್ ಆಟವಾಡಲು ಸಜ್ಜಾಗಿದ್ದ ವ್ಯಕ್ತಿಗೆ ಬೈಕ್‌‌‌ನಲ್ಲಿ ಬಂದ ಆರು ಮಂದಿ ದುಷ್ಕರ್ಮಿಗಳ ತಂಡವೊಂದು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ ಘಟನೆ ಗುರುವಾರ  ನಡೆದಿದೆ.

ದುಷ್ಕರ್ಮಿಗಳಿಂದ ಹಲ್ಲೆಗೊಳಗಾದ ವ್ಯಕ್ತಿಯನ್ನು ಉಚ್ಚಿಲ ಪೆರಿಬೈಲ್ ಮೊಹಮ್ಮದ್ ಇಕ್ಬಾಲ್ (35) ಎನ್ನಲಾಗಿದೆ.

ಇಕ್ಬಾಲ್ ತನ್ನ ಸ್ನೇಹಿತರೊಂದಿಗೆ ನಿತ್ಯವೂ ಸಮುದ್ರ ಕಿನಾರೆಯಲ್ಲಿ ವಾಲಿಬಾಲ್ ಆಟವಾಡುತ್ತಿದ್ದರು. ಎಂದಿನಂತೆ ಗುರುವಾರ ಸಂಜೆ ಕೂಡ ಸ್ನೇಹಿತ ಮನ್ಸೂರ್ ಎಂಬಾತನ ಜೊತೆ ಆಟಕ್ಕೆ ಅಣಿಯಾಗಿ ನಿಂತಾಗ ಎರಡು ಬೈಕ್‌ಗಳಲ್ಲಿ ಬಂದ ದುಷ್ಕರ್ಮಿಗಳು ಇಕ್ಬಾಲ್ ಮೇಲೆರಗಿ ತಲೆ, ಕೈಗಳಿಗೆ ರಾಡ್, ದೊಣ್ಣೆಗಳಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ.

ಗಂಭೀರವಾಗಿ ಗಾಯಗೊಂಡ ಇಕ್ಬಾಲ್‌‌ನನ್ನು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಲ್ಲೆಗೆ ಕಾರಣ ತಿಳಿದುಬಂದಿಲ್ಲ.

ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಎಸಿಪಿ ಶ್ರುತಿ, ಉಳ್ಳಾಲ ಠಾಣೆಯ ಇನ್ಸೆಪೆಕ್ಟರ್ ಗೋಪಿಕೃಷ್ಣ ಆಸ್ಪತ್ರೆಗೆ ಭೇಟಿ ತನಿಖೆ ಕೈಗೊಂಡಿದ್ದಾರೆ.

Comments are closed.