ಕರಾವಳಿ

ಜ.14ರಿಂದ 24 : ಶ್ರೀ ಕ್ಷೇತ್ರ ಕದ್ರಿಯ ವರ್ಷಾವಧಿ ಜಾತ್ರೆ – ರಥೋತ್ಸವ

Pinterest LinkedIn Tumblr

ಮಂಗಳೂರು,ಜನವರಿ.13: ಕದ್ರಿ ಶ್ರೀ ಮಂಜುನಾಥದೇವಸ್ಥಾನದ ವಾರ್ಷಿಕ ಜಾತ್ರೆಯು ಜನವರಿ 14, 2017ರಿಂದ 24ರವರೆಗೆ ಜರಗಲಿರುವುದು. ಶನಿವಾರ ತಾ.14ರಂದು ಬೆಳಿಗ್ಗೆ ‘ತೀರ್ಥಸ್ನಾನ’ ಪ್ರಾರಂಭ ಸಂಜೆಧ್ವಜಾರೋಹಣ, ಮಲರಾಯದೈವದ ಭಂಡಾರ ಆಗಮನ ರಾತ್ರಿಧ್ವಜ ಬಳಿ, ಗರುಡಾರೋಹಣ, ಸಣ್ಣರಥೋತ್ಸವ ನಡೆಯಲಿದೆ.

ಆದಿತ್ಯವಾರರಾತ್ರಿ ದೀಪದ ಬಲಿ ಉತ್ಸವ, ಸಣ್ಣರಥೋತ್ಸವ, ಜ.16, ಬಿಕರ್ನಕಟ್ಟೆ ಸವಾರಿ ಬಲಿ, ಜ.17, ಮಲ್ಲಿಕಟ್ಟೆ ಸವಾರಿ ಬಲಿ, ಜ.18 ಮುಂಡಾಣಕಟ್ಟೆ ಸವಾರಿ ಬಲಿ, ಜ.19 ಕೊಂಚಾಡಿ ಸವಾರಿ ಬಲಿ, ಜ.20 ಏಳನೇ ದೀಪೋತ್ಸವ- ಮಧ್ಯಾಹ್ನ – ಸಾರ್ವಜನಿಕ‌ ನ್ನಸಂತರ್ಪಣೆ ರಾತ್ರಿ ಚಂದ್ರಮಂಡಲ ಉತ್ಸವ, ಜ.21, ಶನಿವಾರ ಮಧ್ಯಾಹ್ನ ರಥಾರೋಹಣ ಹಾಗೂ ಸಂಜೆ ಶ್ರೀ ಮನ್ಮಹಾರಥೋತ್ಸವ – ಬೆಳ್ಳಿ ರಥೋತ್ಸವ ಬಳಿಕ ಕವಾಟ ಬಂಧನ. ಜ.22 ಆದಿತ್ಯವಾರ, ಬೆಳಿಗ್ಗೆ 7ಕ್ಕೆ ಶ್ರೀ ಮಂಜುನಾಥ ದೇವರ ಕವಟೋದ್ಘಾಟನೆ, ಮಹಾಪೂಜೆ, ತುಲಾಭಾರ ಸೇವೆ ನಡೆಯುವುದು.

ರಾತ್ರಿ‌ಉತ್ಸವ ಬಲಿ ಚಂದ್ರಮಂಡಲ ಉತ್ಸವ, ಅವಭೃತ ಸ್ನಾನ ಹಾಗೂ ಧ್ವಜಾವರೋಹಣಕದ್ರಿ ಹತ್ತು ಸಮಸ್ತರಿಂದ ನಡೆಯಲಿದೆ. ಜ.24 ಮಂಗಳವಾರ ಬೆಳಿಗ್ಗೆ ಶ್ರೀ ದೇವಳದಿಂದ ಮಲರಾಯದೈವದ ಭಂಡಾರ ಹೊರಡುವುದು.

ರಾತ್ರಿ ಶ್ರೀ ಮಲರಾಯ ಹಾಗೂ ಪರಿವಾರ ದೈವಗಳ ನೇಮ ಜರಗಲಿದ್ದು ಭಕ್ತಾದಿಗಳು ಪಾಲ್ಗೊಂಡು ಮಂಜುನಾಥದೇವರ ಕೃಪೆಗೆ ಪಾತ್ರರಾಗುವಂತೆ ಕದ್ರಿ ಯೋಗೀಶ್ವರ ಮಠದ ಮಠಾಧಿಪತಿ ಶ್ರೀ ರಾಜಾ ನಿರ್ಮಲ್‌ನಾಥ್‌ಜೀ, ಆಡಳಿತಾಧಿಕಾರಿ ಪಿ. ಶ್ರೀನಿವಾಸ, ಮತ್ತು ಕಾರ್ಯನಿರ್ವಹಣಾಧಿಕಾರಿ ನಿಂಗಯ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Comments are closed.