ಕರಾವಳಿ

ಮಂಗಳೂರಿನ ಪ್ರೈಮಸಿ ಸಂಸ್ಥೆಗೆ 1.08 ಕೋ.ರೂ. ವಂಚನೆ : ಮುಂಬಯಿ ವಿಮಾನ ನಿಲ್ದಾಣದಲ್ಲಿ ಆರೋಪಿ ಸೆರೆ

Pinterest LinkedIn Tumblr

ಮಂಗಳೂರು: ಮಂಗಳೂರಿನ ಪ್ರೈಮಸಿ ಇಂಡಸ್ಟ್ರೀಸ್‌ ಲಿ. ಸಂಸ್ಥೆಗೆ 1.08 ಕೋ.ರೂ. ವಂಚಿಸಿ ತಲೆಮರೆಸಿಕೊಂಡಿದ್ದ ಪ್ರಕರಣದ 2ನೇ ಆರೋಪಿ ಮುಂಬಯಿಯ ಪರ್ವೇಜ್‌ ಅಹಮ್ಮದ್‌ನನ್ನು ಮುಂಬಯಿ ವಿಮಾನ ನಿಲ್ದಾಣದಲ್ಲಿ ಜ. 10ರಂದು ವಿಮಾನ ನಿಲ್ದಾಣ ಪೊಲೀಸರು ಬಂಧಿಸಿದ್ದಾರೆ. ಮತ್ತೋರ್ವ ಆರೋಪಿ ಆದಿಲ್‌ ಶೇಕ್‌ನ ಬಂಧನಕ್ಕೆ ಶೋಧ ಕಾರ್ಯ ಮುಂದುವರಿದಿದೆ.

ಬಂಧಿತ ಆರೋಪಿಯನ್ನು ಪಣಂಬೂರು ಪೊಲೀಸರ ವಶಕ್ಕೆ ಮುಂಬಯಿ ವಿಮಾನ ನಿಲ್ದಾಣ ಪೊಲೀಸರು ಹಸ್ತಾಂತರಿಸಿದ್ದಾರೆ. ಇನ್ಸ್‌ಪೆಕ್ಟರ್‌ ಲೋಕೇಶ್‌, ಎಎಸ್‌ಐ ದೇವ ಶೆಟ್ಟಿ, ಜಗದೀಶ್‌, ದಯಾನಂದ ಎಂ., ಉದಯ ಕುಮಾರ್‌ ಮತ್ತು ಚಂದ್ರಹಾಸ್‌ ಅವರು ಆರೋಪಿಯನ್ನು ಮಂಗಳೂರಿಗೆ ಕರೆತರುವಲ್ಲಿ ಕಾರ್ಯಾಚರಿಸಿದ್ದಾರೆ.

2013ರ ಆಗಸ್ಟ್‌ನಲ್ಲಿ ವಂಚಿಸಿದ ಈ ಪ್ರಕರಣದಲ್ಲಿ ಮಂಗಳೂರು ಕದ್ರಿ ನಿವಾಸಿ ಆದಿಲ್‌ ಶೇಕ್‌ ಮತ್ತು ಮುಂಬಯಿ ಮೂಲದ ಪರ್ವೇಜ್‌ ಅಹಮದ್‌ ಆರೋಪಿಗಳು. ಆದಿಲ್‌ ಶೇಕ್‌ ಮಂಗಳೂರಿನ ಪ್ರೈಮಸಿ ಸಂಸ್ಥೆಯ ಉದ್ಯೋಗಿ ಯಾಗಿದ್ದು, 2009ರಲ್ಲಿ ಕೆಲಸ ಬಿಟ್ಟು ದುಬೈ ಮೂಲದ ಫ್ಯಾಪ್‌ ವರ್ಲ್ಡ್ ಟ್ರೇಡಿಂಗ್‌ ಕಂಪೆನಿಗೆ ಸೇರಿಕೊಂಡಿದ್ದ. ಅಲ್ಲಿ ಅದರ ಮಾಲಕ ಪರ್ವೇಜ್‌ ಅಹಮದ್‌ನೊಂದಿಗೆ ಸೇರಿ ಪ್ರೈಮಸಿ ಸಂಸ್ಥೆಯನ್ನು ಸಂಪರ್ಕಿಸಿ 125 ಮೆಟ್ರಿಕ್‌ ಟನ್‌ ಗುಣಮಟ್ಟದ ರಿಫೈನ್‌x ಪಾರಾಫಿನ್‌ ವ್ಯಾಕ್ಸ್‌ ಕಳುಹಿಸುವ ಒಪ್ಪಂದ ನಡೆಸಿದ್ದ. ಅದರಂತೆ ಪ್ರೈಮಸಿ ಸಂಸ್ಥೆಯು 1,08,28,687 ರೂ. ಹಣ ಪಾವತಿಸಿತ್ತು. ನವಮಂಗಳೂರು ಬಂದರಿನ ಮೂಲಕ 2014ರ ಜನವರಿಯಲ್ಲಿ ಶಿಪ್‌ನಲ್ಲಿ ಬಂದಿದ್ದ ಗೂಡ್ಸ್‌ ಅನ್ನು ಪರಿಶೀಲಿಸಿದಾಗ ಅದರಲ್ಲಿ ವ್ಯಾಕ್ಸ್‌ ಬದಲಿಗೆ ಬಿಳಿಯ ಚಾಕ್‌ ಪೌಡರ್‌ ಪತ್ತೆಯಾಗಿತ್ತು. ಪ್ರೈಮಸಿ ಸಂಸ್ಥೆಗೆ ವಂಚಿಸುವ ಉದ್ದೇಶದಿಂದಲೇ ಈ ರೀತಿ ಮಾಡಲಾಗಿದೆ ಎಂದು ಪಣಂಬೂರು ಪೊಲೀಸರಿಗೆ ದೂರು ನೀಡಲಾಗಿತ್ತು.

1ನೇ ಆರೋಪಿಗೆ ಜಾಮೀನು ರಹಿತ ವಾರಂಟ್‌

ಪ್ರಕರಣಕ್ಕೆ ಸಂಬಂಧಿಸಿ ಮೊದಲಿಗೆ ಇಬ್ಬರೂ ಆರೋಪಿ ಗಳು ತಲೆಮರೆಸಿಕೊಂಡು ಬಳಿಕ ಮಂಗಳೂರಿನ ನ್ಯಾಯಾ ಲಯಕ್ಕೆ ಜಾಮೀನು ಅರ್ಜಿ ಸಲ್ಲಿಸಿ ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದರು. ಆನಂತರದಲ್ಲಿ ನ್ಯಾಯಾ ಲಯದ ಜಾಮೀನು ಷರತ್ತುಗಳನ್ನು ಉಲ್ಲಂ ಸಿದ ಇಬ್ಬರೂ ಆರೋಪಿಗಳು 2014ರಲ್ಲಿ ದುಬೈಗೆ ಪರಾರಿಯಾಗಿದ್ದರು. ತಲೆಮರೆಸಿಕೊಂಡಿದ್ದ ಈರ್ವರ ಪೈಕಿ 1ನೇ ಆರೋಪಿ ಆದಿಲ್‌ ಶೇಕ್‌ 2016ರ ಆ. 8ರಂದು ದುಬೈನಿಂದ ಬರುತ್ತಿ ದ್ದಾಗ ಮುಂಬಯಿ ವಿಮಾನ ನಿಲ್ದಾಣದಲ್ಲಿ ಪೊಲೀಸರು ಬಂಧಿಸಿದ್ದರು. ಆತನನ್ನು ವಶಕ್ಕೆ ಪಡೆದಿದ್ದ ಪಣಂಬೂರು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಧೀಶರು ನ್ಯಾಯಾಂಗ ಬಂಧನ ವಿಧಿಸಿದ್ದರು. ಬಳಿಕ ಜಾಮೀನು ಸಿಕ್ಕಿತ್ತು. ಆನಂತರದಲ್ಲಿ ಈ ಆರೋಪಿ ಕೋರ್ಟಿಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ. ಇದರಿಂದಾಗಿ ಆದಿಲ್‌ ಶೇಕ್‌ನ ವಿರುದ್ಧ ನ್ಯಾಯಾಲಯ ಜಾಮೀನು ರಹಿತ ವಾರಂಟ್‌ ಅನ್ನು ಹೊರಡಿಸಿದೆ.

ಇಂದು 2ನೇ ಆರೋಪಿಯ ಜಾಮೀನು ಅರ್ಜಿ ವಿಚಾರಣೆ

ಜ. 13ರಂದು ಮಂಗಳೂರಿನ 2ನೇ ಜೆಎಂಎಫ್ಸಿ ನ್ಯಾಯಾಲಯದಲ್ಲಿ ಪರ್ವೇಜ್‌ ಅಹಮದ್‌ ಅವರ ಜಾಮೀನು ಅರ್ಜಿ ವಿಚಾರಣೆಗೆ ಬರಲಿದೆ. ಕೋಟಿಗೂ ಮಿಕ್ಕಿದ ಹಣ ವಂಚಿಸಿ ಜಾಮೀನು ಪಡೆದುಕೊಂಡ ಬಳಿಕ ತಲೆಮೆರೆಸಿಕೊಂಡಿದ್ದ ಆರೋಪಿಯಾಗಿರುವ ಕಾರಣ ನ್ಯಾಯಾಧೀಶರು ಜಾಮೀನು ತಿರಸ್ಕೃರಿಸಬಹುದು. ಪ್ರಕರಣದ 1ನೇ ಆರೋಪಿಗೆ ನ್ಯಾಯಾಲಯವು ಈ ಹಿಂದೆ 2 ಬಾರಿ ಜಾಮೀನು ನೀಡಿಯೂ ತಲೆಮರೆಸಿ ಕೊಂಡಿರುವ ಕಾರಣ ಜಾಮೀನು ರಹಿತ ವಾರಂಟ್‌ ಅನ್ನು ನ್ಯಾಯಾಲಯವು ಹೊರಡಿಸಿದೆ.

ವರದಿ ಕೃಪೆ :ಉದಯವಾಣಿ

Comments are closed.