ಉಳ್ಳಾಲ, ಜನವರಿ.12: ನಗರಸಭಾ ಸದಸ್ಯರೋರ್ವರ ಮಾರುತಿ ಸ್ವಿಪ್ಟ್ ಕಾರನ್ನು ರಾತ್ರಿಯ ವೇಳೆಯಲ್ಲಿ ಕಿಡಿಗೇಡಿಗಳು ಹಾನಿಗೊಳಿಸಿದ ಘಟನೆ ಉಳ್ಳಾಲ ದರ್ಗಾ ಬಳಿಯ ಮೇಲಂಗಡಿಯಲ್ಲಿ ಬುಧವಾರ ರಾತ್ರಿ ನಡೆದಿದ್ದು, ಪ್ರಕರಣ ಗುರುವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ.
ಉಳ್ಳಾಲ ನಗರಸಭಾ ಸದಸ್ಯ ಫಾರೂಕ್ ಉಳ್ಳಾಲ್ ಅವರು ಬುಧವಾರ ರಾತ್ರಿ ಎಂದಿನಂತೆ ವ್ಯವಹಾರ ಮುಗಿಸಿ ತನ್ನ ಮನೆಗೆ ಕಾರಲ್ಲಿ ಬಂದಿದ್ದು ಕಾರಿನ ಇಂಜಿನ್ ನಿಂದ ತೈಲ ಸೋರಿಕೆಯಾಗುತ್ತಿದ್ದು ಕಂಡು ಬಂದಿದ್ದರಿಂದ ಕಾರನ್ನು ಗೇಟಿನ ಹೊರಗಡೆಯ ರಸ್ತೆ ಬದಿಯಲ್ಲೇ ನಿಲುಗಡೆ ಮಾಡಿ ಮಲಗಿದ್ದರು.
ಗುರುವಾರ ಮುಂಜಾನೆ ಫಾರೂಕ್ ಅವರು ರಸ್ತೆ ಬದಿಯಲ್ಲಿ ನಿಂತಿದ್ದ ತಮ್ಮ ಕಾರಿನ ಬಂದಾಗ ಕಾರಿನ ಗಾಜುಗಳು ಪುಡಿಗೈದಿದ್ದು ಹಾಗೂ ಕಾರಿಗೂ ಹಾನಿಗೊಳಿಸಿದ್ದು ಕಂಡು ಬಂದಿದೆ. ಕೂಡಲೇ ಉಳ್ಳಾಲ ಪೊಲೀಸರಿಗೆ ಫಾರೂಕ್ ಅವರು ಮಾಹಿತಿ ನೀಡಿದ್ದು, ಯಾರೋ ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ ಎಂದು ತಿಳಿಸಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಫಾರೂಕ್ ಉಳ್ಳಾಲ್ ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
Comments are closed.