ಕರಾವಳಿ

ಮಂಗಳೂರು ಪೊಲೀಸ್ ಇಲಾಖೆಗೆ ಬಂದಿದೆ 25 ಹೈಟೆಕ್ ಹೊಯ್ಸಳ ಕಾರುಗಳು :ಎಸ್ಪಿ ವ್ಯಾಪ್ತಿಗೂ ಬರಲಿದೆ 3 ಕಾರುಗಳು

Pinterest LinkedIn Tumblr

ಮಂಗಳೂರು, ಜನವರಿ. 12 : ಅತ್ಯಾಧುನಿಕ ವ್ಯವಸ್ಥೆಗಳಿಂದ ಕೂಡಿರುವ 25 ಹೈಟೆಕ್ ಹೊಯ್ಸಳ ಕಾರುಗಳು(ಗಸ್ತು ವಾಹನ) ಮಂಗಳೂರು ನಗರಕ್ಕೆ ಆಗಮಿಸಿದ್ದು, ಗುರುವಾರ ಈ ಕಾರುಗಳಿಗೆ ಗೃಹ ಸಚಿವ ಪರಮೇಶ್ವರ್ ಅವರು ಚಾಲನೆ ನೀಡಿದರು.

ಈ ಕಾರುಗಳು ನಗರದ ಹಾಗೂ ಜಿಲ್ಲೆಯ ನಾನಾ ಕಡೆ ಕಾರ್ಯವಹಿಸಲಿದೆ. ಮಂಗಳೂರು ಮಹಾನಗರದ ಭದ್ರತೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಮಂಗಳೂರು ನಗರ ಪೊಲೀಸ್ ಕಮಿಷನರ್ ವ್ಯಾಪ್ತಿಗೆ ಈ ಹೈಟೆಕ್ ಮಾದರಿಯ ಹೊಯ್ಸಳ ಕಾರುಗಳನ್ನು ನೀದಲಾಗಿದೆ. ದ. ಕ ಜಿಲ್ಲಾ ಎಸ್ಪಿ ವ್ಯಾಪ್ತಿಗೂ 3 ಕಾರುಗಳು ಮಂಜೂರಾಗಿದ್ದು ಈ ವಾಹನಗಳಿಗೆ ತಂತ್ರಜ್ಞಾನ ಅಳವಡಿಕೆ ಕೆಲಸ ಬೆಂಗಳೂರಿನಲ್ಲಿ ನಡೆಯುತ್ತಿದ್ದು ಜನವರಿ 15ರ ಬಳಿಕ ಅಥವಾ ಈ ತಿಂಗಳಾಂತ್ಯಕ್ಕೆ ಬರಲಿವೆ.

ಈ ಹೈಟೆಕ್ ಮಾದರಿಯ ಹೊಯ್ಸಳ 25 ಕಾರುಗಳು ಕಮಿಷನರ್ ವ್ಯಾಪ್ತಿಯ ಒಂದೊಂದು ಠಾಣೆಗೆ ಒಂದರಂತೆ ನೀಡಲು ಉದ್ದೇಶಿಸಲಾಗಿದೆ. ಚಾಲಕ ಸೇರಿದಂತೆ ಕನಿಷ್ಠ ಇಬ್ಬರು ಸಿಬ್ಬಂದಿ ಈ ವಾಹನದಲ್ಲಿ ದಿನದ 24 ಗಂಟೆಯೂ ಕಾರ್ಯನಿರ್ವಹಿಸಲಿದ್ದಾರೆ. ಒಟ್ಟು 3 ಪಾಳಿಯಲ್ಲಿ ನಾಲ್ಕು ಮಂದಿ ಸಿಬ್ಬಂದಿ ಇದರಲ್ಲಿ ಕರ್ತವ್ಯ ನಿರ್ವಹಿಸಲಿದ್ದಾರೆ.

ಕಮಿಷನರೇಟ್ ವ್ಯಾಪ್ತಿಯಲ್ಲಿ ಯಾವುದೇ ಘಟನೆ ನಡೆದಾಕ್ಷಣ ‘100’ ನಂಬರ್ ನ ಕಂಟ್ರೋಲ್ ರೂಮ್ ಗೆ ವಿಷಯ ತಿಳಿಸಬೇಕು. ಈ ಬಗ್ಗೆ ಕಂಟ್ರೋಲ್ ರೂಮ್ ನಿಂದ ನೇರ ಮಾಹಿತಿ ಘಟನೆ ನಡೆದ ಸ್ಥಳದ ಸಮೀಪವಿರುವ ಹೊಯ್ಸಳ ತಂಡಕ್ಕೆ ರವಾನೆಯಾಗುತ್ತದೆ.
ನಂತರ ಘಟನೆ ನಡೆದ ಸ್ಥಳಕ್ಕೆ ಆ ವಾಹನ ತಕ್ಷಣ ತೆರಳಿ ಘಟನೆಯ ಸಂಪೂರ್ಣ ಮಾಹಿತಿ ಕಂಟ್ರೋಲ್ ರೂಮ್ ಮತ್ತು ಹಿರಿಯ ಅಧಿಕಾರಿಗಳಿಗೆ ನೀಡಬೇಕು. ಈ ವಾಹನದಲ್ಲಿ ಟ್ಯಾಬ್ ಇರುವುದರಿಂದ ಫೋಟೋ ಮಾಹಿತಿಯನ್ನು ಕೂಡಲೇ ಅಪ್ಲೋಡ್ ಮಾಡಲು ವ್ಯವಸ್ಥೆ ಇದೆ.

ಇದರಿಂದ ಆರೋಪಿಯ ಚಿತ್ರ ಸೇರಿದಂತೆ ದೂರಿನ ಬಗ್ಗೆ ಸಮಗ್ರ ವಿವರವನ್ನು ರವಾನಿಸಲಾಗುವುದು. ಈ ವ್ಯವಸ್ಥೆಯಿಂದ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗುವವರನ್ನು ಸಾಗ್ಯವಾದಷ್ಟು ಬೇಗನೇ ಸರೆ ಹಿಡಿಯಲು ಸಾಧ್ಯವಾಗಲಿದೆ.

Comments are closed.