ಉಡುಪಿ: ತಮ್ಮ ‘ಬಹುವಚನ ಭಾರತ’ ಕೃತಿಗೆ “ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಕಟಿಸಿರುವ ಪ್ರಶಸ್ತಿಯನ್ನು ಖ್ಯಾತ ಲೇಖಕ ಮತ್ತು ಚಿಂತಕ ಜಿ. ರಾಜಶೇಖರ ಸ್ವೀಕರಿಸಲು ನಿರಾಕರಿಸಿದ್ದಾರೆ. ಜಿ.ರಾಜಶೇಖರ್ ಅವರ ‘ಬಹುವಚನ ಭಾರತ’ ಕೃತಿಗೆ 2015 ನೇ ಸಾಲಿನ ಪುಸ್ತಕ ಬಹುಮಾನ ಪ್ರಶಸ್ತಿಯನ್ನು ಕರ್ನಾಟಕ ಸಾಹಿತ್ಯ ಅಕಾಡೆಮಿಯು ಪ್ರಕಟಿಸಿತ್ತು.

ಈ ಕುರಿತು ಜಿ. ರಾಜಶೇಖರ್ ಪ್ರತಿಕ್ರಿಸಿದ್ದು ‘ಬಹುವಚನ ಭಾರತ’ಕೃತಿಗೆ ಪ್ರಶಸ್ತಿ ನೀಡಿದ್ದು ಅಕಾಡೆಮಿ ನನ್ನ ಬಗ್ಗೆ ತೋರಿದ ಗೌರವಕ್ಕೆ ನಾನು ಕೃತಜ್ಞ. ಆದರೆ, 2015ರಲ್ಲಿ ಸಾಹಿತಿಗಳು ತಮಗೆ ನೀಡಿದ ಪ್ರಶಸ್ತಿಗಳ ನಿರಾಕರಣೆ, ವಾಪಾಸಾತಿಗೆ ಯಾವ ಸನ್ನಿವೇಶ ಕಾರಣವಾಯಿತೋ, ಆ ಸನ್ನಿವೇಶ ಈಗ ಇನ್ನಷ್ಟು ಹದಗೆಟ್ಟಿದೆ. ಅದು ಸರಿಹೋಗುವ ಆಶಾವಾದವೂ ಇಲ್ಲ. ಹಾಗಾಗಿ ಈ ಪ್ರಶಸ್ತಿಯನ್ನ ನಾನು ಸ್ವೀಕರಿಸುವುದಿಲ್ಲ. ಎಂದು ತಿಳಿಸಿದ್ದಾರೆ.
Comments are closed.