ಕರ್ನಾಟಕ

Expiry Date ನಮೂದಿಸದ ವಸ್ತುಗಳ ಬಳಕೆಯಿಂದ ಆಗುವ ಕೆಟ್ಟಪರಿಣಾಮಗಳ ಬಗ್ಗೆ ಒಂದಿಷ್ಟು ಮಾತು.

Pinterest LinkedIn Tumblr

ಮಂಗಳೂರು: ಕಾನೂನಿನ ಪ್ರಕಾರ ಕೆಳಗೆ ಕೊಟ್ಟಿರೋ ಸಾಮಾನುಗಳ ಮೇಲೆ Expiry Date ನಮೂದಿಸಿರುವುದಿಲ್ಲ. ಹಾಗಂತ ಇವುಗಳನ್ನು ಬಸಸೋದು ನಿಲ್ಲಿಸಲೇ ಬೇಕಾಗಿಲ್ಲ ಅಂತಲ್ಲ ಒಂದೊಂದಾಗಿ ಓದುತ್ತಾ ಹೋಗಿ ನಿಮಗೆ ತಿಳಿಯುತ್ತೆ.

ಸ್ಪಂಜ್ ಹಾಕಿರೋ ತಕೆದಿಂಬು:
2-3 ವರ್ಷ ಆದಮೇಲೆ ಸ್ಪಂಜ್ ಹಾಕಿರೋ ತಲೆದಿಂಬು ಬಳಸೋದು ಒಳ್ಳೆಯದಲ್ಲ ಯಾಕೆಂದರೆ ಅದನ್ನ ಬಳಸಿದ್ರ್ರೆ ಅದು ದೂಳನ್ನ ಆಕರ್ಷಿಸೊದಲ್ಲದೆ ಅದರ ಅಕಾರ ಹಾಳಾಗುದರಿಂದ ನಿಮ್ಮ ಕತ್ತಿಗೂ ಹಾನಿಕಾರಕ.

ಚಪ್ಪಲ್:
ಕಾಲಿಗೆ ಹಾಕುವ ಚಪ್ಪಲ್ ಗಳನ್ನು ೬ ತಿಂಗ;ಉ ಮಾತ್ರ ಬಳಸಬಹುದು ಹೆಚ್ಚು ಬಳಸಬೇಕಾದರೂ ತೊಳೆದು ಬಸಸೋ ಅಭ್ಯಾಸ ಮಾಡುಕೊಳ್ಳಿ ಇಲ್ಲ ಅಂದರೆ ಅದರಿಂದ ಫಂಗಸ್ ಹರಡುತ್ತೆ.

ಸ್ಪಾಂಜ್ :
ಸ್ನಾನಕ್ಕೆ ಬಳಸೋ ಸ್ಪಾಂಜ್ ಕೂಡ 5ವಾರ ಅದಮೇಲೆ ಬಳಸಿದರೆ ಫಂಗಸ್ ಬೆಳಿಯುತ್ತೆ, ಬಳಸೋವಾಗ ಆಗಾಗ ಬಿಸಿ ನೀರಿನಲ್ಲಿ ಕುದ್ದಿಸಿ ಬಳಸೋ ಅಭ್ಯಾಸ ಮಾಡುಕೊಳ್ಳಬೇಕು.

ಬಾತ್ ಟವಲ್ :
1-2 ವರ್ಷಕ್ಕಿಂತ ಹೆಚ್ಚು ಟವಲ್‌ಗಳನ್ನು ಬಳಸೋಹಾಗಿಲ್ಲ , ಯಾಕೆ ಗೊತ್ತಾ? ಅದನ್ನ ಆಗಾಗ ಒದ್ದೆ ಮಾಡೊದರಿಂದ ಕೀಟಾಣುಗಳನ್ನು ಆಕರ್ಷಿಸುತ್ತೆ.

ಬಾತ್ ಸ್ಟೂಲ್ :
ಸಾಮಾನ್ಯವಾಗಿ ಕೆಲವು ಸ್ನಾನದ ಮನೇಲಿ ಬಳಸುವಂತಹ ಸ್ಟೂಲ್‌ನ್ನು 6 ತಿಂಗಳಿಗಿಂತ ಹೆಚ್ಚು ಬಳಸಬೇಡಿ, ಬಳಸೋವಾಗ ತೊಳೆದು ಬಳಸೋ ಅಭ್ಯಾಸ ಮಾಡ್ಕೋಳಿ.

ಟೂತ್ ಬ್ರಶ್:
3 ತಿಂಗಳು ಆಗುತ್ತಿದಂತೆ ಟೂತ್ ಬ್ರಶ್ ಬದಲಾಯಿಸಿ ಅಷ್ಟು ಮಾತ್ರವಲ್ಲದೇ, ಜ್ವರ, ನೆಗಡಿ, ಕೆಮ್ಮು ಇಂತಹ ಖಾಯಿಲೆಗಳು ಬಂದು ವಾಸಿ ಅದಮೇಲೆ ಬದಲಾಯಿಸಿ ಇಲ್ಲ ಅಂದ್ರೆ ಆ ಖಾಯಿಲೆಗಳು ಮತ್ತೆ ಬರಬಹುದು.

ಸೆಂಟು:
ಸೆಂಟು ಸರಿಯಾಗಿ ಮುಚ್ಚಿಟ್ಟಿದ್ದರೆ 3 ವರ್ಷ ಬಳಸಬಹುದು ಅದಕ್ಕಿಂತ ಹೆಚ್ಚು ಬಳಸುವಂತಿಲ್ಲ ಬಳಸಿದರೆ ಅದರಿಂದ ಬಟ್ಟೆಗಳು ಹಾಳಗಬಹುದು. ಅಥವಾ ಚರ್ಮಗಳ ಮೇಲೆ ಕೆಟ್ಟ ಪರಿಣಾಮ ಬಿಳಬಹುದು

ಫೆಸಿಪೈಯರ್ನ :
ಮಕ್ಕಳನ್ನ ಸಮಾಧಾನ ಮಾಡೊಕ್ಕೆ ಇರುವಂತಹ ಪೆಸಿಫೈಯರ್ನ 2-5 ವಾರಕ್ಕಿಂತ ಹೆಚ್ಚು ಬಳಸಬೇಡಿ. ಅದರಲ್ಲಿರೋ ಲೇಟೆಕ್ಸ್ ಅನ್ನೋ ಪದಾರ್ಥ ಬಳಸಿದ್ರೆ ಕಿಟಾಣುಗಳನ್ನ ಹರಡುತ್ತೆ.

ಒಳ‍ಉಡುಪು :
1-2 ವರ್ಷಕ್ಕಿಂತ ಹೆಚ್ಚು ಒಳ ಉಡುಪುಗಳನ್ನು ಬಳಸಬಾರದು.

ಮಸಾಲೆ ಪದಾರ್ಥ:
ಮನೇಯಲ್ಲಿ ಬಳಸುವಂತಹ ಮಸಾಲೆ ಪದಾರ್ಥಗಳನ್ನು 1-3 ವರ್ಷ ಮಾತ್ರ ಬಳಸಬಹುದು ಅದಾದ ಮೇಲೆ ಅದು ತಮ್ಮ ಸುವಾಸನೆಯನ್ನ ಕಲೆದುಕೊಳ್ಳುತ್ತವೆ ಇನ್ನು ಮಸಾಲೆ ಪುಡಿಗಳೂ ಕೇವಲ 6 ತಿಂಗಳು ಮಾತ್ರ ಬಾಳಿಕೆ ಬರುವುದು.

Comments are closed.