ಕರಾವಳಿ

ಅಂಬೇಡ್ಕರ್ ಬಗ್ಗೆ ಕಮೆಂಟ್ಸ್ ಫೋಸ್ಟ್ : ದೀಪಕ್ ಕಾಮತ್ ಬಂಧನ

Pinterest LinkedIn Tumblr

ಮಂಗಳೂರು, ಜ.12: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಹೀಯಾಳಿಸಿ ಸಾಮಾಜಿಕ ಜಾಲ ತಾಣಗಳಲ್ಲಿ ಬರೆದು ಪೋಸ್ಟ್ ಮಾಡಿರುವ ಆರೋಪದ ಮೇಲೆ ವ್ಯಕ್ತಿಯೊಬ್ಬರನ್ನು ಪಾಂಡೇಶ್ವರ ಠಾಣಾ ಪೊಲೀಸರು ಬುಧವಾರ ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ದೀಪಕ್ ಕಾಮತ್ ಎಂದು ಗುರುತಿಸಲಾಗಿದೆ.

ಸಾಹಿತಿಯಂತೆ ಬಿಂಬಿಸಿಕೊಂಡಿದ್ದ ದೀಪಕ್ ಕಾಮತ್ ಇತ್ತೀಚೆಗೆ ತನ್ನ ಫೇಸ್ ಬುಕ್‌ನಲ್ಲಿ ಡಾ.ಅಂಬೇಡ್ಕರ್ ಅವರನ್ನು ಅವಾಚ್ಯವಾಗಿ ನಿಂಧಿಸಿ ಬರಹಗಳನ್ನು ಬರೆದು ದಲಿತ ಸಮುದಾಯದ ಆಕ್ರೋಶಕ್ಕೆ ಗುರಿಯಾಗಿದ್ದ. ಈ ಬಗ್ಗೆ ದಲಿತ ಮುಖಂಡ ರಮೇಶ್ ಕೋಟ್ಯಾನ್ ಅವರು ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ ಹಿನ್ನೆಲೆಯಲ್ಲಿ ಪೊಲೀಸರು ದೀಪಕ್ ಕಾಮತ್ ನನ್ನು ಬಂಧಿಸಿದ್ದಾರೆ ಎನ್ನಲಾಗಿದೆ.

Comments are closed.