ಕುಂದಾಪುರ: ಕುಂದಾಪುರ ತಾಲೂಕಿನ ಗಂಗೊಳ್ಳಿ ಸಮೀಪದ ಕೆಳಾಕಳಿ ಕ್ರಾಸ್ ನಿವಾಸಿ ಲಿಯೋ ಅಲ್ಮೇಡಾ ಅವರು ಮೀನುಗಾರಿಕೆ ನಡೆಸುವ ವೇಳೆ ಅವರಿಗೆ ಬಾರೀ ಗಾತ್ರದ 9 ಏಡಿಗಳು ಸಿಕ್ಕಿದೆ.
ನಿತ್ಯದ ಕಾಯಕವಾದ ಮೀನುಗಾರಿಕೆಗೆ ಅಲ್ಮೇಡಾ ಅವರು ತೆರಳಿದ್ದರು. ಅರಾಟೆ ಸಮೀಪದಲ್ಲಿ ಬಲೆ ಹಾಕಿ ಏಡಿ ಹಿಡಿಯುತ್ತಿದ್ದ ವೇಳೆ ಬಲೆಗೆ 1 ರಿಂದ ಎರಡು ಕೆ.ಜಿ. ತೂಕದ ಬಾರೀ ಗಾತ್ರದ 9 ಏಡಿಗಳು ಲಭಿಸಿದೆ. ಈ ಬ್ರಹತ್ ಗಾತ್ರದ ಏಡಿಗಳನ್ನು ನೋಡಿ ಲಿಯೋ ಅಲ್ಮೇಡಾ ಸೇರಿದಂತೆ ಇತರೇ ಮೀನುಗಾರರು ಖುಷಿಯ ಜೊತೆಗೆ ಅಚ್ಚರಿಗೊಳಗಾಗಿದ್ದಾರೆ. ಏಡಿ ಹಿಡಿಯುವುದರಲ್ಲಿ ನಿಪುಣರಾದ ಲಿಯೋ ಅವರಿಗೆ ಇದೇ ಮೊದಲ ಬಾರಿಗೆ ಇಷ್ಟು ದೊಡ್ದ ಗಾತ್ರದ ಏಡಿ ಬಲೆಗೆ ಸಿಕ್ಕಿದೆ. ಸಿಕ್ಕ ಏಡಿಗಳನ್ನು ಕುಂದಾಪುರದಲ್ಲಿ ಮಾರಾಟ ಮಾಡಿದ ಖುಷಿ ಲಿಯೋ ಅವರಿಗೆ. ಕುಂದಾಪುರ ಭಾಗದ ಏಡಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆಯಿದ್ದು ಒಳ್ಳೆಯ ಬೆಲೆಯೂ ಇರುವುದು ಮತ್ತೊಂದು ವಿಶೇಷವಾಗಿದೆ.
Comments are closed.