
ಉಳ್ಳಾಲ : ಎಸ್ಎಸ್ಎಪ್ ಉಳ್ಳಾಲ ಸೆಕ್ಟರ್ ನ ನೂತನಾದ್ಯಕ್ಷರಾಗಿ ಪುನರಾಯ್ಕೆಯಾದ ಸಯ್ಯಿದ್ ಖುಬೈಬ್ ತಂಙಲ್ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಪುನರಾಯ್ಕೆಯಾದ ಮುಝಮ್ಮಿಲ್ ಕೋಟೆಪುರ ಇವರಿಗೆ ಕುಂಪಲ ತ್ವೈಬಾ ಗಾರ್ಡನ್ ನಲ್ಲಿ ತೊಕ್ಕೋಟು ಸೆಕ್ಟರ್ ಅಧ್ಯಕ್ಷ ಇಲ್ಯಾಸ್ ಸಖಾಫಿ ರವರ ಅಧ್ಯಕ್ಷತೆ ಯಲ್ಲಿ ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮ ಉದ್ಘಾಟಿಸಿ ಎಸ್ ವೈ ಎಸ್ ಉಳ್ಳಾಲ ಸೆಂಟರ್ ಅಧ್ಯಕ್ಷ ಬಶೀರ್ ಅಹ್ಶನಿ ತೋಡಾರ್ ಮಾತನಾಡಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಮಜೀದ್ ಅಮಾನಿ ಹೊಸಂಗಡಿ ಜನಪರ ಕಾರ್ಯದಲ್ಲಿ ತೊಕ್ಕೋಟು ಸೆಕ್ಟರ್ ಮುಂಚೂಣಿಯಲ್ಲಿದೆ ಎಂದು ಹೇಳಿದರು.

ಈ ಸಂದರ್ಭ ದಲ್ಲಿ ಎಸ್ಸೆಸ್ಸೆಫ್ ತೊಕ್ಕೋಟು ಸೆಕ್ಟರ್ ಉಪಾಧ್ಯಕ್ಷ ಶಮೀರ್ ಶೇವಂತಿಗುಡ್ಡೆ, ಸದಸ್ಯ ಬಾತಿಷ್ ಮಂಚಿಲ ಉಪಸ್ಥಿತರಿದ್ದರು. ಎಸ್ಎಸ್ಎಫ್ ದ ಕ ಜಿಲ್ಲಾ ಕೋಶಾಧಿಕಾರಿ ಅಲ್ತಾಫ್ ಕುಂಪಲ ಸ್ವಾಗತಿಸಿದರು. ತೊಕ್ಕೋಟು ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಜಾಫರ್ ಯು ಎಸ್ ನಿರೂಪಿಸಿದರು.
Comments are closed.