
ಉಳ್ಳಾಲ : ಕುಂಪಲ ಶ್ರೀ ಬಾಲಕೃಷ್ಣ ಮಂದಿರದ ಅಯ್ಯಪ್ಪ ಭಕ್ತವೃಂದದ 18ನೇ ವರ್ಷದ ಶಬರಿಮಲೆ ಯಾತ್ರೆ ಮತ್ತು ಅಯ್ಯಪ್ಪ ಸ್ವಾಮಿಯ ಬೆಳ್ಳಿಯ ಪ್ರತಿಮೆಯ ಪ್ರತಿಷ್ಟಾಪನೆ ಕಾರ್ಯಕ್ರಮವು ಮಂದಿರದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ದೇರಳಕಟ್ಟೆ ಅಯ್ಯಪ್ಪ ದೇವಸ್ಥಾನದ ಗುರುಸ್ವಾಮಿ ವಿಶ್ವನಾಥ ಕಾಯರ್‌ಪಳಿಕೆ, ಕೋಟೆಕಾರು ಅಯ್ಯಪ್ಪ ದೇವಸ್ಥಾನದ ಲಿಂಗಪ್ಪ ಗಟ್ಟಿ, ಬಗಂಬಿಲ ಸತ್ಯನಾರಾಯಣ ಮಂದಿರದ ಗುರುಸ್ವಾಮಿ ನಾರಾಯಣ, ತೊಕೊಟ್ಟು ಅಯ್ಯಪ್ಪ ಭಕ್ತ ವೃಂದದ ದಯಾನಂದ ತೊಕ್ಕೊಟ್ಟು, ಬಾಲಕೃಷ್ಣ ಮಂದಿರದ ಗುರುಸ್ವಾಮಿ ಮಹಾಬಲ ಬಂಗೇರ ಇವರುಗಳನ್ನು ಸನ್ಮಾನಿಸಲಾಯಿತು.
ಪುರೋಹಿತರಾದ ತಿರುಮಲೇಶ್ವರ ಭಟ್, ಮಂದಿರದ ಮಹಾ ಪೋಷಕ ಕೇಶವದಾಸ್ ಬಗಂಬಿಲ, ಅಧ್ಯಕ್ಷ ಸತೀಶ್ ಕುಂಪಲ, ಮಹಿಳಾ ಸಮಿತಿ ಅಧ್ಯಕ್ಷೆ ರೇಖಾ ಚಂದ್ರಹಾಸ್, ಮಾಧವ ಬಂಗೇರ, ಅಶೋಕ್ ಕೆ, ಉಗ್ಗಪ್ಪ ಟೈಲರ್, ಪ್ರವೀಣ್ ಕುಲಾಲ್, ರವೀಂದ್ರ ಕುಂಪಲ, ಸಂಜೀವ ಕುಲಾಲ್, ಲಕ್ಷ್ಮಣ್ ಕೆರೋಡಿಯನ್, ಕಿಶೋರ್ ಡಿ.ಕೆ, ನಾಗೇಶ್ ಕುಂಪಲ, ಶಿವಾನಂದ ಟೈಲರ್, ಪುರುಷೋತ್ತಮ ರಾವ್, ಚಂದ್ರಹಾಸ ಮೂರುಕಟ್ಟೆ, ನಾಗೇಶ್ ಚಿತ್ರಾಂಜಲಿನಗರ, ಮಹಿಳಾ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು. ಪ್ರವೀಣ್ ಎಸ್. ಕುಂಪಲ ಕಾರ್ಯಕ್ರಮ ನಿರೂಪಿಸಿದರು.
Comments are closed.